
ಕೋಲಾರ,ಏ,೬-ಶ್ರೀ ಬಸವೇಶ್ವರ ಭಕ್ತ ಮಂಡಳಿ ಹಾಗೂ ಶರಣೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ಬಸವ ಜಯಂತಿ ಹಾಗೂ ಶ್ರೀ ಬಸವೇಶ್ವರ ದೇವಾಲಯ ೧೨ನೇ ವರ್ಷದ ಅಷ್ಟಬಂಧನ ಹಾಗೂ ಮಹಾಕುಂಭಾಭೀಷೇಕ ಕಾರ್ಯಕ್ರಮವನ್ನುಆಯೋಜಿಸಲಾಗಿದೆ
ಪ್ರತಿವರ್ಷದಂತೆ ಈ ವರ್ಷವು ಬಸವ ಜಯಂತಿ ಪ್ರಯುಕ್ತ ಏ,೧೭ ರ ಶುಕ್ರವಾರದಿಂದ ಏ,೨೦ರ ಸೋಮವಾವರದವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏ,೧೭ರ ಶುಕ್ರವಾರ ಸಂಜೆ ೬.೩೦ಕ್ಕೆ ಉದ್ಘಾಟನ ಕಾರ್ಯಕ್ರಮವು ತಾಲ್ಲೂಕಿನ ಶ್ರೀಮದ ನಾಗಲಾಪುರ ಮಠದ ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಜಯಶ್ರೀ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಯುವ ವಾಗ್ಮಿ ಲೇಖಕಿ ಹಾರಿಕ ಮಂಜುನಾಥ್ ಇವರಿಂದ ವಚನಾಮೃತ ವಾಚನ ನಡೆಯಲಿದೆ.
ಏ,೧೮ರ ಶನಿವಾರ ಸಂಜೆ ಸಂಜೆ ಬೆಂಗಳೂರಿನ ಖ್ಯಾತ ಗುರು ಎಂಟರ್ ಟ್ರೈನರ್‍ಸ್ ಮ್ಯೂನಿಕಲ್ ಇವೆಂಟ್ಸ್‌ನ ಹೆಸರಾಂತ ಜಿ.ಆರ್. ಚಂದ್ರು ಅರ್ಪಿಸುವ ಚೇತನ್ ಸಂಗಡಿಗರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಏ,೧೯ರ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಸುಮಂಗಲಿಯರಿಂದ ಗಂಗಾಪೂಜೆ, ಆಲಯ ಪ್ರದಕ್ಷಿಣೆ, ಪ್ರವೇಶ ಗಣಪತಿ ಪೂಜೆ, ಪುಣ್ಯಾಹನಾಂದಿ ರಕ್ಷಾ ಬಂಧನ ಪಂಚಗವ್ಯ ಪ್ರಾಶನ,ಋತ್ವಿಗರಣ, ಅಂಕುರಾರ್ಪಣೆ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ,ದಿಬಾಲಕರಪೂಜೆ. ಉಮಾಮಹೇಶ್ವರ ಪೂಜೆ, ಲಕ್ಷ್ಮೀನಾರಾಯಣ ಪೂಜೆ,ಪ್ರಧಾನ ಕಳಶಗಳ ಪೂಜೆ, ಗಣಪತಿ ಹೋಮ, ವಾಸ್ತು ಹೋಮ, ರಕ್ಷೆಘ್ನು ಹೋಮ, ನವಗ್ರಹ ಹೋಮ,ಉಮಾಮಹೇಶ್ವರ ಲಕ್ಷ್ಮೀ ನಾರಾಯಣಹೋಮ, ಪುರುಷಸೂಕ್ತ ಹೋಮ, ಪ್ರಧಾನ ಹೋಮಾಧಿಗಳು,ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗ, ಶುಭಮಹೋರ್ತದಲ್ಲಿ ಅಷ್ಟಬಂಧನ ಸ್ಥಾಪನೆ ಸಂಜೆ ೭.೩೦ಕ್ಕೆ ಬೆಂಗಳೂರಿನ ಕಿರುತೆರೆ ಕಲಾವಿದೆ ಶ್ರೀಮತಿ ಮೀನಾಕ್ಷಿ ಇವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ.
ಏ.೨೦ರ ಸೋಮವಾರ ಬಸವ ಜಯಂತಿ ಪ್ರಯುಕ್ತ ಬ್ರಾಹ್ಮಿ ಮುಹೂರ್ತದಲ್ಲಿ ಸುಪ್ರಭಾತದ ಸೇವೆಯೊಂದಿಗೆ ಗಣಪತಿ ಪ್ರಾರ್ಥನೆ. ಶ್ರೀಬಸವೇಶ್ವರ ಸ್ವಾಮಿಗೆ ಪ್ರಾಣ ಪ್ರತಿಷ್ಟೆ, ರುದ್ರಾಭಿಷೇಕ, ಪ್ರಧಾನ ಹೋಮ, ಶಿವ ಪಂಚಾಕ್ಷರಿ ಹೋಮ, ಜಯಾಧಿ ಹೋಮ. ಜಯಾಧಿ ಹೋಮ, ಮಹಾಪೂರ್ಣಾಹುತಿ, ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಅಲಂಕಾರ, ದರ್ಪಣ ದರ್ಶನ,ದೇನು ದರ್ಶನ ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ನಂತರದಲ್ಲಿ ೧೨.೩೦ಕ್ಕೆ ಪ್ರಸಾದ ವ್ಯವಸ್ಥೆಯನ್ನು ಶ್ರೀಮತಿ ಉಷಾ ಗಂಗಾಧರ್ ಮತ್ತು ಕುಟುಂಬದವರಿಂದ ಮಾಡಲಾಗಿದೆ.
ಸಂಜೆ ೬.೩೦ಕ್ಕೆ ಬೆಳ್ಳಿ ಅಶ್ವಾರೂಢ ಬಸವೇಶ್ವರ ಉತ್ಸವವನ್ನು ಏರ್ಪಡಿಸ ಲಾಗಿದೆ. ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯಸ್ವಾಮಿಗಳು ನೆರವೇರಿಸಲಿದ್ದಾರೆ. ವಿಶೇಷ ಆಕರ್ಷಣೆ ಹೆಸರಾಂತ ವೀರಗಾಸೆ, ಅಘೋರಿ,ಭದ್ರಕಾಳಿ, ಕರಡಿವಾಧ್ಯ ಗಳೊಂದಿಗೆ ದೇವಾಲಯದ ಅವರಣ ದಿಂದ ಉತ್ಸವವು ಹೊರಟು ಗರದ ರಾಜಬೀದಿಗಳಲ್ಲಿ ಸಂಚರಿಸಿ ನಂತರ ದೇವಾಲಯವನ್ನು ತಲುಪಲಿದೆ. ನಂತರದಲ್ಲಿ ಅಗ್ನಿಕುಂಡ ಪ್ರವೇಶ ಮತ್ತು ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮಗಳಿಗೆ ಮಂಗಳ ಹಾಡಲಿದೆ.























