
ಸಂಜೆವಾಣಿ ವಾರ್ತೆ,
ವಿಜಯಪುರ, ಡಿ. ೧೯ : ಬಸವಾದಿ ಪ್ರಮಥರ ವಚನಗಳು ನಮ್ಮೆಲ್ಲರ ಬದುಕಿಗೆ ದಾರಿದೀಪಗಳಾಗಿವೆ, ಬಸವ ಧರ್ಮ ವಿಶ್ವ ಧರ್ಮವಾಗಬೇಕು ಎಂದು ಶ್ರೀ ಶಾಂತವೀರ ಪದವಿ ಪೂರ್ವ ಮಹಾವಿದ್ಯಾಲಯದ
ಪ್ರಾಚಾರ್ಯ ಪ್ರೊ.ಎಮ್.ಬಿ.ರೆಬಿನಾಳ ಕರೆ ನೀಡಿದರು.
ನಗರದ ಬಿ. ಎಲ್.ಡಿ.ಇ.ಸಂಸ್ಥೆಯ, ಜೆ.ಎಸ್. ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿ. ಧರೆಪ್ಪ ಮತ್ತು ಬಸಮ್ಮ ಐಹೊಳ್ಳಿ ದಂಪತಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದೆAದಿಗೂ ಪ್ರಸ್ತುತ. ದಾನ, ದಾಸೋಹ, ಧರ್ಮ, ಪೂಜೆ ಇವೆಲ್ಲ ತೋರಿಕೆ ಮತ್ತು ಡಾಂಬಿಕತೆಯಿAದ ಕೂಡಿರಬಾರದು. ಅವರು ಕಾಯಕ-ದಾಸೋಹ-ಭಕ್ತಿ -ಸಹಕಾರ-ಸಮಾನತೆ-ಐಕ್ಯತೆಗಳ ಮಹತ್ವವನ್ನು ವಚನಸಾಹಿತ್ಯದ ಹಿನ್ನೆಲೆಯಲ್ಲಿ ತಿಳಿಸಿಕೊಟ್ಟರು.
ನಾನು ಸಹ ಇದೇ ಮಹಾವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ ಎಂದು ಹೇಳಿಕೊಂಡರು .
ದತ್ತಿ ದಾಸೋಹಿಗಳಾದ ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ
ಸAಯೋಜನಾಧಿಕಾರಿ ಡಾ.ವಿ.ಡಿ. ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರ ಸ್ಮರಣಾರ್ಥ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾರ್ಥಕವಾದ ಸಂಗತಿಯೆAದು ತಿಳಿಸಿದರು.
ಫ.ಗು.ಹಳಕಟ್ಟಿಯವರ ಮುಖ್ಯ ಆಶಯದಂತೆ ಪ್ರತಿಯೊಂದು ಕಾರ್ಯಕ್ರಮದ ಆರಂಭದಲ್ಲಿ ವಚನಗಾಯನ ಮಾಡಲು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ವಿ.ಡಿ. ಐಹೊಳ್ಳಿ, ಶ್ರೀ ಪಟವರ್ಧನ ದಂಪತಿಗಳು ಮತ್ತು ಪ್ರೊ. ಎಮ್.ಬಿ. ರೆಬಿನಾಳ ಅವರಿಗೆ ಸನ್ಮಾನಿಸಲಾಯಿತು.
ಪಟವರ್ಧನ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಇದೇ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಜೆ. ಎಸ್. ಎಸ್. ಶಿಕ್ಷಣ ಮಹಾವಿದ್ಯಾಲಯದ ಸಂಸ್ಕಾರದಿAದಲೇ ನಾನು ಹಲವಾರು ಸಾಮಾಜಿಕ ಸೇವೆಗಳನ್ನು ಮಾಡಲು ಸಾಧ್ಯವಾಯಿತು ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಬಿ.ಎಲ್.ಡಿ.ಇ. ಸಂಸ್ಥೆ, ಎಸ್. ಎಸ್. ಆವರಣದ ಆಡಳಿತ ಅಧಿಕಾರಿ ಪ್ರೊ.ಐ.ಎಸ್. ಕಾಳಪ್ಪನವರ ಅವರು ಮಾತನಾಡಿ, ಹಿರಿಯರ ಮೌಲ್ಯಗಳ ಸ್ಮರಣೆಗಾಗಿ ನಡೆಸಿದ ಈ ದತ್ತಿ ಉಪನ್ಯಾಸ ಕಾರ್ಯಕ್ರಮವು ಬಹಳಷ್ಟು ಅರ್ಥಪೂರ್ಣವಾಗಿದೆ. ಈ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ. ಭಾರತಿ. ವಾಯ್. ಖಾಸನೀಸ ಅವರು ದಾನ, ಧರ್ಮಕ್ಕೆ ಮಾದರಿಯಾಗಿದ್ದಾರೆ. ಅವರು ಎಸ್. ಎಸ್. ಆವರಣದ ವಿವಿಧ ಶಾಲೆಗಳಿಗೆ ದಾನ-ದತ್ತಿಗಳನ್ನು ನೀಡಿದ್ದಾರೆ. ಮಹಾವಿದ್ಯಾಲಯದ ಆವರಣದಲ್ಲಿ ೬೦,೦೦೦ ರೂ. ವೆಚ್ಚದಲ್ಲಿ ಸರಸ್ವತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಂಸ್ಥೆಯ ಸಮನ್ವಯ ಶಾಲೆಗೆ ಒಂದು ಲಕ್ಷ ರೂಪಾಯಿ ವೆಚ್ಚದ ಪೆನಲ್ ಬೋರ್ಡ್ ನ್ನು ಕಾಣಿಕೆಯಾಗಿ ನೀಡಿದ್ದಾರೆ. ಇನ್ನೂ ಅವರ ಗೊತ್ತಿರದ ದಾನ ಧರ್ಮಗಳು ಹಲವಾರು ಇವೆ. ಎಲೆಮರೆಯ ಕಾಯಿಯಂತೆ ಅವರಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಭಾರತಿ. ವಾಯ್. ಖಾಸನೀಸ ಅವರು ಮಾತನಾಡಿ, ಸಮಾಜ ಮತ್ತು ಸಂಸ್ಥೆಗೆ ಮಾಡಿರುವ ದಾನ, ಧರ್ಮ, ಸೇವೆಗಳು ಅದು ದೇವರ ಸೇವೆ ಇದ್ದ ಹಾಗೆ. ಇದರಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಬಿ.ಎಲ್.ಡಿ.ಇ ಸಂಸ್ಥೆಯ ಕೊಡುಗೆ ಎಂದು ಸಂಸ್ಥೆಯ ಉಪಕಾರ ಸ್ಮರಿಸಿದರು.
ವಿದ್ಯಾರ್ಥಿನಿ ಪಲ್ಲವಿ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು. ಐಶ್ವರ್ಯ ಜೋಷಿ ಪ್ರಾರ್ಥಿಸಿದರು. ಪ್ರವೀಣ ಹೊಸಮನಿ ವಚನ ಗಾಯನ ಮಾಡಿದರು. ಐಶ್ವರ್ಯ ಉಮರಾಣಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಎಮ್.ಬಿ. ಕೋರಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್. ಎಸ್.ಪಾಟೀಲ, ಪಿ. ಡಿ. ಮುಲ್ತಾನಿ, ಡಾ. ಎಸ್. ಪಿ. ಶೇಗುಣಸಿ, ಪ್ರಶಿಕ್ಷಣಾರ್ಥಿಗಳು ಮತ್ತು ಐಹೊಳ್ಳಿ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

























