
ಭಾಲ್ಕಿ :ಫೆ.6:ತಾಲೂಕಿನ ತಲವಾಡ ಕೆ ಗ್ರಾಮದ ಶಿವಪ್ರಕಾಶ್ ಕುಂಬಾರ್ ಅವರ ಮಹಾಮನೆಯಲ್ಲಿ ತಿಂಗಳ 10 ರ ಕಾರ್ಯಕ್ರಮ ಜರುಗಿತು. ಚಂದ್ರಕಾಂತ್ ಬಿರಾದಾರ್ ನಿವೃತ್ತ ಪ್ರಾಚಾರ್ಯರು ಶಿವಾಜಿ ಕಾಲೇಜು ಭಾಲ್ಕಿ ಹಾಗೂ ವಚನ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಬೀದರ್ ನಿರ್ದೇಶಕರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಸವಾದಿ ಶಿವಶರಣರ ವಚನಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು ಈ ಸಂದರ್ಭದಲ್ಲಿ ಭಾಲ್ಕಿ ಶಿವಾಜಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಬಾಲಾಜಿ ತಾಡಮಲೆ ಇದ್ದರು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಾಗರಾಜ್ ಇಚ್ಚಂಗಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ಹಾಲಿ ಆಡಳಿತಾಧಿಕಾರಿಗಳು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಜಿಲ್ಲಾ
ಪೆÇೀಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಹಾವೇರಿ ಇವರು ಮಾತನಾಡಿ ಜೀವನದಲ್ಲಿ ಒಳ್ಳೆಯ ಭಾಂದವ್ಯ ಹಾಗೂ ಸ್ನೇಹವೇ ಇದ್ದರೆ ಮಾತ್ರ ಜೀವನ ನಡೆಸಲು ಸಹಕಾರಿಯಾಗುತ್ತದೆ ಮತ್ತು ಸತ್ಸಂಗಗಳು ಅವಶ್ಯಇದೆ ಎಂದು ಹೇಳಿದರು.
ತಳವಡ ಗ್ರಾಮದ ಅಕ್ಕನ ಬಳಗದವರಿಂದ ವಚನ ಪ್ರಾರ್ಥನೆ ನೆರವೇರಿತು.
ಚಿರಂಜೀವಿ ಪ್ರಜ್ವಲ್ ಶಿವಪ್ರಕಾಶ್ ಕುಂಬಾರ್ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಮಧುಕರ್ ಗಾಂವಕರ್ ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಭುದೇವ ವೀರಣ್ಣ ಕುಂಬಾರ್,ರಾಜೇಶ್ ಸರ್ ಹಾಗೂ ಶ್ರೀ ಚನ್ನಬಸವೇಶ್ವರ ಗುರುಕುಲದ ಶಿಕ್ಷಕಿಯರ ಬಳಗ ಉಪಸ್ಥಿತರಿದ್ದರು.
ಕಾರ್ಯಕ್ರಮ ಕೊನೆಯಲ್ಲಿ ಶ್ರೀದೇವಿ ಪ್ರಕಾಶ್ ಕುಂಬಾರ್ ಸರ್ವರಿಗೂ ಶರಣು ಸಮರ್ಪಣೆ ಸಲ್ಲಿಸಿದರು.



























