
ಕೋಲಾರ,ನ.೨೭: ಭಾರತದ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಒಬ್ಬ ಕುಲಪತಿಯ ಅವಧಿಯಲ್ಲಿ ಎರಡೆರಡು ವಿಚಾರಣಾ ಆಯೋಗಗಳನ್ನು ನೇಮಕ ಮಾಡಿಕೊಂಡ ಕಳಂಕವೆನಾದರು ಇದ್ದರೆ ಇದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ.
ಸತ್ಯ ಹರಿಶ್ಚಂದ್ರನ ವಂಶಸ್ಥನಂತೆ ಮಾತನಾಡುವ ಕುಲಪತಿ ಅಕ್ರಮಗಳ ಸರದಾರನೆಂದರೆ ತಪ್ಪಾಗಲಾರದು. ಮುಂದುವರಿದು ಈ ಹಿಂದೆ ರಾಜ್ಯಪಾಲರು ನಿವೃತ್ತ ನ್ಯಾಯಾಧೀಶ ಅಶೋಕ್ ಬಿ ಹಂಚಿಗೆರೆ ಅವರ ನೇತೃತ್ವದಲ್ಲಿ ಏಕ ವ್ಯಕ್ತಿ ತನಿಖಾ ಆಯೋಗ ರಚಿಸಿದ್ದು ಅವರು ಪಾರದರ್ಶಕ ತನಿಖಾ ವರದಿ ಸಿದ್ದಪಡಿಸುವ ಸಂದರ್ಭದಲ್ಲಿ ಕುಲಪತಿಗಳು ತಮ್ಮ ಪ್ರಭಾವ ಬಳಿಸಿ ಅವರನ್ನು ಬೇರೆ ಹುದ್ದೆಗೆ ವರ್ಗಾಯಿಸಿ ತಮ್ಮ ಕುಲಸ್ಥ ಮತ್ತು ಸಂಬಂಧಿ ನಿವೃತ್ತ ನ್ಯಾಯಾಧೀಶ ಕೃಷ್ಣಭಟ್ ಅವರನ್ನು ನೇಮಕ ಮಾಡಿಸಿಕೊಂಡು ಬಂದು ತನಗೆ ತಾನೆ ಕ್ಲೀನ್ ಚಿಟ್ ಪಡೆದುಕೊಳ್ಳುತ್ತಾನೆ. ಮುಂದುವರಿದು ನ್ಯಾಯಮೂರ್ತಿ ಕೃಷ್ಣಭಟ್ ವರದಿಯನ್ನು ಇಲ್ಲಿಯವರೆಗೆ ರಾಜ್ಯಪಾಲರು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಮುಂದುವರಿದು ಇವರ ಅವಧಿಯಲ್ಲಿ ಅಕ್ರಮಗಳೇ ತುಂಬಿಕೊಂಡಿದ್ದು ಆಡಳಿತ ಕುಲಸಚಿವನಾಗಿ ಬಂದ ಶ್ರೀಧರ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ ಮಕ್ಕಳ ಹಣವನ್ನು ಹೆಗ್ಗಣಗಳ ತರ ತಿನ್ನುತ್ತಿದ್ದಾರೆ.
ಸೆನೆಟ್ ಮಾಜಿ ಸದಸ್ಯ ರವೀಶ್ ಅವರು ಮಾಡಿರುವ ಆರೋಪಗಳ ಕುರಿತು ಆರೋಪಿತ ಅಧಿಕಾರಿಯೇ ಸರ್ಕಾರಕ್ಕೆ ವರದಿ ನೀಡಿದರು ಸರ್ಕಾರ ಒಪ್ಪಿಕೊಳ್ಳದೆ ತನಿಖಾ ಆಯೋಗ ರಚಿಸಿರುತ್ತಾರೆ.
ಮುಂದುವರಿದು ತಾನು ಸತ್ಯ ಹರಿಶ್ಚಂದ್ರನ ವಂಶಸ್ಥ ಎಲ್ಲಾ ದಾಖಲೆಗಳನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಹಾಕಿದ್ದೇವೆಂದು ಹಸಿ ಹಸಿ ಸುಳ್ಳು ಹೇಳುವ ಮಹಾನುಭಾವ ಇಲ್ಲಿಯವರೆಗೆ ನಾನು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ೧೪ ಅರ್ಜಿಗಳನ್ನು ಸಲ್ಲಿಸಿದ್ದು ಒಂದೇ ಒಂದು ಅರ್ಜಿಗೆ ದಾಖಲೆಗಳನ್ನು ನೀಡಿಲ್ಲ. ಅಂದರೆ ಇದರ ಅರ್ಥ ಏನು…? ಇವರು ಪ್ರಾಮಾಣಿಕರಾಗಿದ್ದರೆ ದಾಖಲೆಗಳನ್ನು ನೀಡಬೇಕು ಅಲ್ಲವೇ…? ಹೋಗಲಿ ಕಡೆ ಪಕ್ಷ ನಮ್ಮ ಮಾಧ್ಯಮ ಮಿತ್ರರಿಗಾದರು ದಾಖಲೆಗಳನ್ನು ನೀಡಲಿ.
ಇನ್ನೂ ಕೆಲಸ ಕಳೆದುಕೊಂಡವರೆಂದು ಸಂಭೋದಿಸಿದ್ದಾರೆ, ಕೆಲಸವೆಂಬುದು ನನಗೆ ಒಂದು ಗುರ್ತಿಗೆ ವಿನಃ ಹೊಟ್ಟೆಪಾಡಿಗೆ ಅಲ್ಲ, ಜೊತೆಗೆ ನನ್ನ ಹೊಟ್ಟೆಪಾಡಿಗೆ ಒಳ್ಳೆಯ ವ್ಯವಹಾರವಿದೆ. ಇನ್ನೂ ಕುಲಪತಿಗಳ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರ ರಚಿಸಿರುವ ತನಿಖಾ ಆಯೋಗದ ಬಗ್ಗೆ ಹೇಳಿದ್ದು ದಾಖಲೆಗಳನ್ನು ನೀಡಲು ತಿಳಿಸಿದ್ದಾರೆ ಎಲ್ಲಾ ದಾಖಲೆಗಳನ್ನು ಇವರೇ ಇಟ್ಟುಕೊಂಡು ನಮಗೆ ದಾಖಲೆ ನೀಡದೆ ಭಯಪಡುತ್ತಿದ್ದಾರೆ. ಮುಂದುವರಿದು ಅವರ ಶವಯಾತ್ರೆ ಕಾರ್ಯಕ್ರಮ ಒಳ ಮೀಸಲಾತಿ ಹೋರಾಟದ ಕಾರಣಕ್ಕಾಗಿ ನಿಂತು ಹೋಯಿತು. ಈ ಕಾರಣಕ್ಕಾದರೂ ಕುಲಪತಿಗಳು ಸಂಘಟನೆಗಳಿಗೆ ಧನ್ಯವಾದ ಹೇಳಬೇಕು.
ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವನನ್ನು ಉದ್ಯೋಗದಿಂದ ತೆಗೆದು ಮತ್ತೆ ಉದ್ಯೋಗಕ್ಕೆ ಸೇರಿಸಿಕೊಂಡ ಮಹಾನುಭಾವ ಯಾವ ಮುಖವಿಟ್ಟುಕೊಂಡು ಇಂತಹ ನೀತಿ ಬೋಧನೆ ಮಾಡುತ್ತಾನೆ.
ತನಿಖಾ ಆಯೋಗಕ್ಕೆ ದಾಖಲೆ ನೀಡಲು ಸಿದ್ದವಿರುವ ಇವರು ನಮಗೇಕೆ ದಾಖಲೆಗಳನ್ನು ನೀಡುತ್ತಿಲ್ಲ. ಭ್ರಷ್ಟರೆಲ್ಲರು ಸೇರಿ ಎಸಿ ರೂಮಿನಲ್ಲಿ ಕುಳಿತುಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವುದಲ್ಲ, ಇವರಿಗೆ ಧಮ್ಮು, ತಾಕತ್ತು ಅನ್ನುವುದು ಇದ್ದರೆ ದಾಖಲೆ ಕೊಟ್ಟು ಮಾತನಾಡಲಿ ಎಂದು ಡಾ.ಮಂಜುನಾಥ. ಆರ್ ಸವಾಲು ಹಾಕಿದ್ದಾರೆ.


























