ಆರ್‌ಎಸ್‌ಎಸ್ ನಿಷೇಧಿಸಿ ಪ್ರಜಾಪ್ರಭುತ್ವ ಉಳಿಸಿ

ಜೇವರ್ಗಿ:ಅ.೧೫: ೧೮ರಂದು ಕಲ್ಬುರ್ಗಿ ಮಹಾನಗರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ನಿಷೇಧಿಸಿ ಪ್ರಜಾಪ್ರಭುತ್ವ ಉಳಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕ ರಾ ದ ಸ (ಕ್ರಾಂತಿಕಾರಿ)ರಾಜ್ಯ ಸಮಿತಿಯ ಸಂಚಾಲಕರಾದ ಅರ್ಜುನ್ ಭದ್ರೆ ಬೆಂಗಳೂರು, ರಾಜ್ಯ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ಬೆಂಗಳೂರು ರವರು ಭಾಗವಹಿಸಲಿದ್ದಾರೆ ಎಂದು ಜೇವರ್ಗಿ ತಾಲೂಕು ಸಂಚಾಲಕ ಮಹೇಶ್ ಕೋಕಿಲ ಹೇಳಿದರು
ನಂತರ ಮಾತನಾಡಿದ ಅವರುಜಿಲ್ಲಾ ಸಮಿತಿ, ಎಲ್ಲಾ ತಾಲೂಕು ಪದಾಧಿಕಾರಿಗಳು, ದಲಿತ ಮುಖಂಡರು, ಪ್ರಗತಿಪರ ಚಿಂತಕರು, ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರ ಅನುಯಾಯಿಗಳು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಮನವಿ.ಮಾಡಿದ್ದಾರೆ