
ಜಮಖಂಡಿ: ಫೆ.9:ರಸ್ತೆಯ ಬದಿಯ ಆಹಾರ ಪದಾರ್ಥಗಳು ಸೇವಿಸಲು ಎಷ್ಟು ಹಿತಕರ ಇದಕ್ಕೆ ಆಹಾರ ಸುರಕ್ಷಾ ಕ್ರಮವೇ ಇಲ್ಲವೇ ಉದರ ಪೆÇೀಷಣೆಗೆ ಗೂಡಂಗಡಿಯವರು ಇಲ್ಲದ್ದನ್ನು ಮಾರಿ ತಮ್ಮ ಉದರವನ್ನು ತುಂಬಿಸುವದರ ಜೊತೆಗೆ ಖಾಧ್ಯ ಪ್ರೀಯರ ಉದರವನ್ನು ವಿಷದಿಂದ ತುಂಬಿಸುವ ಕಾರ್ಯ ಎಗಿಲ್ಲದೆ ನಡೆದಿದೆ.
ನಗರ ಸಹಿತ ಗ್ರಾಮೀಣ ಭಾಗದಲ್ಲಿ ಹಲವೆಡೆ ರಸ್ತೆ ಬದಿಯ ಕುರುಕಲು ತಿಂಡಿಗಳ ವ್ಯಾಪಾರ ಜೋರಾಗೆಯೇ ನಡೆಯುತ್ತಿದೆ ಆದರೆ ಇಲ್ಲಿ ಸ್ವಚ್ಛತೆ ಮಾತ್ರ ಶೂನ್ಯವಾಗಿದೆ. ಮುಸ್ಸೆಂಜೆಯಿಂದ ರಾತ್ರಿಯವರೆಗೆ ಈ ಗೂಡಂಗಡಿಗಳ ವ್ಯಾಪಾರ ಬಲು ಜೋರು ಅವರು ಮಾಡಿದ ಖಾದ್ಯದ ರುಚಿ ನೋಡಲು ಜನತೆ ಮುಗಿ ಬೀಳುತ್ತದೆ.
ಆದರೆ ಇವರು ತಯಾರಿಸು ಆಹಾರ ಎಷ್ಟು ಸುರಕ್ಷಿತ ಮತ್ತು ಎಷ್ಟು ಆರೋಗ್ಯಕರ ಎನ್ನುವದನ್ನು ಕಡೆಗಣಿಸಿ ನಾಗರಿಕರು ಕೇವಲ ಬಾಯಿ ರುಚಿಗಾಗಿ ಇಂತಹ ಆಹಾರ ಸೇವಿಸುವದು ರೂಢಿಸಿಕೊಂಡಿದ್ದಾರೆ,
ನಗರದ ಹೋಟೆಲ್ ಹಾಗೂ ರೆಸ್ಟೋರೆಂಟ್ ಹಾಗೂ ಗೂಡಂಗಡಿಗಳು ಕುರುಕಲು ಆಹಾರ ಪದಾರ್ಥ ಮಾರಾಟ ಮಾಡಿ ತಮ್ಮ ತುತ್ತಿನ ಚೀಲ ತುಂಬಿಕೊಳ್ಳುತ್ತಾರೆ. ಆದರೆ ಅವರು ನೀಡುವ ಆಹಾರ ಬೇರೆಯವರಿಗೆ ವಿಷಪ್ರಾಶನ ಮಾಡಿದಂತೆದಿ ಎಂದು ಅರಿಯದೇ ತಮ್ಮ ಜೇಬು ತುಂಬಿಸಿಕೊಳ್ಳುವಲ್ಲಿ ಮಾತ್ರ ನಿತರಾಗಿದ್ದಾರೆ ಎಂದರೆ ವಿರ್ಯಾಸವಾಗಲಾರದು.
ನಗರದ ವಿವಿಧ ಭಾಗ ಸೇರಿ ಗ್ರಾಮೀಣ ಪ್ರದೇಶದಲ್ಲಿ ಚರಂಡಿಯ ಪಕ್ಕದಲ್ಲಿ ಅಥವಾ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಮತ್ತು ಗಬ್ಬೆದ್ದು ನಾರುವ ಸ್ಥಳಗಳಲ್ಲಿ ಮಾಂಸಾಹಾರ, ಸಸ್ಯಾಹಾರದ ತಿಂಡಿಗಳ ಮಾರಾಟವು ಎಗ್ಗಿಲ್ಲದೇ ಸಾಗಿದೆ. ಎಗ್ಗ ರೈಸ ಹೆಸರಿನಲ್ಲಿ ಅನ್ನಕ್ಕೆ ವಿಧವಾದ ಬಣ್ಣ ಹಾಗೂ ಟೆಸ್ಟಿಂಗ್ ಪೌಡರ್ ಸೇರಿಸಿ ಗ್ರಾಹಕರನ್ನು ಮೆಚ್ಚಿಸುವಲ್ಲಿ ನಿರತರಾಗಿದ್ದರೆ ಇತ್ತ ಗ್ರಾಹಕ ತನ್ನ ಆರೋಗ್ಯದ ಮೇಲೆ ಎಷ್ಟು ಹಿತ ಎನ್ನುವ ಅರಿವಿಗೆ ಹೋಗದೇ ಸಂತೃಪ್ತಿಯಿಂದ ಬಾಯಿ ಚೆಪ್ಪರಿಸಿಕೊಳ್ಳುತ್ತಾರೆ.
ಇವರು ಸ್ಥಳದಲ್ಲಿ ತಯಾರು ಮಾಡುವ ಆಹಾರ ಪದಾರ್ಥದ ಮೇಲೆ ವಾಹನದ ಧೂಳು ಮಣ್ಣು ಕಸ ಎಷ್ಟು ಬೀಳುತ್ತದೆ ಎನ್ನುವದನ್ನು ಗಣನೆಗೆ ತೆಗೆದುಕೋಳಲು ತಯಾರಿಲ್ಲ ಈ ಆಹಾರ ಪದಾರ್ಥಗಳ ಗುಣಮಟ್ಟದ ಗೋಜಿಗೆ ಹೋಗುತ್ತಿಲ್ಲ ಆದರೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.
ರಾಜ್ಯದಲ್ಲಿ ಆಹಾರ ಸುರಕ್ಷಾ ಕಾನೂನು ಜಾರಿಯಲ್ಲಿದೆ. ಚಿಲ್ಲರೆ, ಸಗಟು ವ್ಯಾಪಾರಸ್ಥರು ಈ ಕಾನೂನ್ನು ಪಾಲಿಸಬೇಕು ಆದರೆ ಎಷ್ಟರ ಮಟ್ಟಿಗೆ ಈ ಕಾನೂನು ಪಾಲನೆಯಾಗುತ್ತಿದೆ ಎನುವದೇ ಪ್ರಶ್ನೆಯಾಗಿದೆ ಸರಕಾರ 20 ಮೈಕ್ರೋನಾಗಿಂತ ಕಡಿಮೆ ಮಟ್ಟದ ಪ್ಲಾಸ್ಟಿಕ ಬ್ಯಾನ ಮಾಡಿದ್ದರೂ ಸಹ ಅದೇ ಪ್ಲಾಸ್ಟಿಕನಲ್ಲಿ ಪಾರ್ಸಲ ಮಾಡಿ ನೀಡುತ್ತಾರೆ ಇಲ್ಲಿ ಯಾವ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಾಣಸಿಗಬಹುದಾಗಿದೆ.
ಎಗ್ಗಿಲ್ಲದೆ ನಡೆದ ರಾಸಾಯನಿಕ ಬಳಕೆ ಕುರುಕಲು ತಿಂಡಿಗಳಿಗೆ ಮತ್ತು ಎಗ್ಗರೈಸ ಪಾನಿಪುರಿ ಗೋಬಿ ಮಂಚೂರಿಗಳಿಗೆ ಹೆಚ್ಚಿನ ರುಚಿ ಬರಲೆಂದು ಕೆಲ ವಿಷಯುಕ್ತ ರಾಸಾಯನಿಕ ವಸ್ತುಗಳನ್ನು ಬಳಕೆಯಾಗುತ್ತಿದೆ ಇದನ್ನು ತಡೆಗಟ್ಟುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕೆಲ ಪ್ರಜ್ಞಾವಂತ ನಾಗರಿಕರ ಯಕ್ಷ ಪ್ರಶ್ನೆಯಾಗಿದೆ.
ಪೌರಾಯುಕ್ತ ಜ್ಯೋತಿ ಗಿರೀಶ
ಆರೋಗ್ಯ, ನಗರ ಸಭೆ, ಕಂದಾಯ ಇಲಾಕೆಯವರ ಸಹಯೋಗದಲ್ಲಿ ಇಂತಹ ಗೂಡಂಗಡಿಗಳ ಮೇಲೆ ಪರಿಸೀಲನೆ ನಡೆದಿದೆ. ಇನ್ನು ಸ್ವತಃ ನಾವೇ ಖುದ್ದಾಗಿ ಹೋಗಿ ಎಲ್ಲ ಖಾದ್ಯ ಪದಾರ್ಥಗಳ ಅಂಗಡಿಗಳ ಆಹಾರ ಪದಾರ್ತಗಳನ್ನು ಪರಿಸೀಲಿಸಿ ಕಲುಶಿತ ಆಹಾರ ಮಾರಾಟ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವದು. ಎಲ್ಲ ಕಾದ್ಯ ಮತ್ತು ತಂಬಾಕು ಉತ್ಪನ್ನಗಳ ಅಂಗಡಿಗಳಿಗೆ ಪರವಾನಿಗೆ ನೀಡಲಾಗುವದು ಯಾವುದೆ ಅಂಗಡಿಗಳು ಪರವಾನಿಗೆ ಇಲ್ಲದಿದ್ದರೆ ಅವುಗಳ ಮೇಲೆ ಕ್ರಮಜರುಗಿಸಲಾಗುವದು ಎಂದು ಹೇಳಿದರು.






















