Home ಜಿಲ್ಲೆ ಚಿತ್ರದುರ್ಗ ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ, ಏ.೨- ಬಿಎಎಂಎಸ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ದಾರುಣ ಘಟನೆ ಹೊಳಲ್ಕೆರೆಯಲ್ಲಿ ನಡೆದಿದೆ.
ಹೊಳಲ್ಕೆರೆಯ ಬಸವ ಲೇಔಟ್ ನ ಬಿಎಎಂಎಸ್ ವಿದ್ಯಾರ್ಥಿನಿ ನಿಖಿತಾ(೨೩) ಆತ್ಮಹತ್ಯೆ ಮಾಡಿಕೊಂಡವರು, ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಅಧ್ಯಾಪಕ ಡಾ. ರಾಜು ಮತ್ತು ಕೆಲ ವಿದ್ಯಾರ್ಥಿನಿಯರು ಕಾರಣ ಎಂದು ಉಲ್ಲೇಖಿಸಿದ್ದಾರೆ.

ಮಲ್ಲಾಡಿಹಳ್ಳಿಯ ಮೆಡಿಕಲ್ ನಿಖಿತಾ ಕಾಲೇಜಿನಲ್ಲಿ ಬಿಎಎಂಎಸ್ ಓದುತ್ತಿದ್ದರು. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ನಿಖಿತಾ, ತನ್ನ ಸಾವಿಗೆ ಕಾರಣವಾಗಿರುವ ಕಾನೂನುಕ್ರಮ ಜರಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಧ್ಯಾಪಕ ಡಾಕ್ಟರ್ ರಾಜು, ಪತ್ನಿ ನಿಶಾ ಮತ್ತು ಕೆಲ ವಿದ್ಯಾರ್ಥಿಗಳ ವಿರುದ್ಧ ಹೆಸರುಗಳನ್ನು ನಿಖಿತಾ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಅಧ್ಯಾಪಕ ರಾಜು ಜೊತೆ ನಿಖಿತಾ ಅವರಿಗೆ ಸಂಬಂಧ ಕಲ್ಪಿಸಿ ಕೆಲವರು ಮಾಡಿದ ಅಪಪ್ರಚಾರದಿಂದ ನೊಂದ ನಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹೊಳಲ್ಕೆರೆ ಪೊಲೀಸರು ಅಧ್ಯಾಪಕ ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.