
ಸೇಡಂ , ಫೆ,೧೪: ಬೆಂಗಳೂರು ಕೇಂದ್ರ ಕಛೇರಿ ಜೆ ಪಿ ಭವನದಲ್ಲಿ ಕಲಬುರಗಿ ಜಿಲ್ಲಾ ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಬಾಲರಾಜ್ ಅಶೋಕ ಗುತ್ತೇದಾರ ರವರನ್ನು ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ರಾದ ಜೆ.ಕೆ ಕೃಷ್ಣ ರೆಡ್ಡಿ ರವರು ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ರವರು ನೇಮಕಾತಿ ಆದೇಶ ಪತ್ರವನ್ನು ನೀಡಿ ಗೌರವಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರುಗಳು,ಉಪಸ್ಥಿತರಿದ್ದರು.



























