ಬಾಲಭಾರತಿ ವಿದ್ಯಾಮಂದಿರ ಮಾದರಿ ಶಾಲೆ: ಸಿದ್ದಲಿಂಗಶ್ರೀ

ತಾಳಿಕೋಟೆ:ಜ.೧: ಜ್ಞಾನಭಾರತಿ ವಿಶ್ವಸ್ಥ ಸಮೀತಿಯ ನಡೆಸಿಕೊಂಡು ಬರಲಾಗುತ್ತಿರುವ ಬಾಲಭಾರತಿ ವಿದ್ಯಾಮಂದಿರದ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವದರೊಂದಿಗೆ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾಬುದ್ದಿ ನೀಡಿ ಉನ್ನತ ಸ್ಥಾನಮಾನಕ್ಕೇರಲು ಅನುವು ಮಾಡಿಕೊಟ್ಟಂತಹ ಇಲ್ಲಿಯ ಶಿಕ್ಷಕರ ಹಾಗೂ ಆಡಳಿತ ಮಂಡಳಿಯವರ ಸೇವೆ ಗುಣಗಾನಮಯವಾಗಿದೆ ಎಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ನುಡಿದರು.
ಮಂಗಳವಾರರAದು ಬಾಲಭಾರತಿ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡುತ್ತಿದ್ದ ಶ್ರೀಗಳು ಪಾಲಕರಾದವರು ಮಕ್ಕಳ ಮೇಲೆ ಶಿಕ್ಷಣಕ್ಕಾಗಿ ಒತ್ತು ನೀಡದಿರಿ ಅನ್ಯಮಕ್ಕಳ ವ್ಯಕ್ತಿತ್ವಕ್ಕೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ ಎಲ್ಲ ಮಕ್ಕಳಲ್ಲಿಯೂ ಒಳ್ಳೆಯ ಪ್ರತಿಭೆಯೆಂಬುದು ಇದ್ದೇ ಇರುತ್ತದೆ ಆಯಾಪ್ರತಿಭೆಗನುಗುಣವಾಗಿ ಶಿಕ್ಷಣ ನೀಡಿ ಎಂದು ಪಾಲಕರಿಗೆ ಸಲಹೆ ನೀಡಿದ ಶ್ರೀಗಳು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ನಯವಿನಯ ಹಾಗೂ ನಮೃತೆಯ ಭಾವನೆಯನ್ನು ಮೂಡಿಸುವ ಕಾರ್ಯ ಮಾಡಿ ಆತ ತನ್ನಿಂದ ತಾನೇ ದೊಡ್ಡವನಾಗುತ್ತಾನೆಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದ್ದನ್ನು ಶ್ರೀಗಳು ನೆನಪಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್. ಸಾವಳಗಿ ಅವರು ಮಾತನಾಡಿ ಬಾಲ ಭಾರತಿ ವಿದ್ಯಾ ಸಂಸ್ಥೆ ಒಳ್ಳೆಯ ಶಿಕ್ಷಣ ನೀಡುತ್ತದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಡಾ. ಇಂಜಿನೀಯರ್ ರಂತ ಹುದ್ದೆಗಳನ್ನು ಪಡೆದಿದ್ದಾರೆ ಶಾಲಾ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಣವೆಂಬುದು ಇಲ್ಲಿ ಸರಿಯಾಗಿ ದೊರೆಯುತ್ತದೆ ಇನ್ನೂ ಶಾಲಾವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕೆಂದು ಸಲಹೆ ನೀಡಿದ ಅವರು ಬಾಲಭಾರತಿ ವಿದ್ಯಾಸಂಸ್ಥೆಯಲ್ಲಿ ಕಲೆಯ ಹಾಗೂ ಒಳ್ಳೆ ಸಂಸ್ಕೃತಿ ಒಳ್ಳೆಯದಿರುವದೆಂದು ಸಾವಳಗಿ ವಿವರಿಸಿದರು.
ಇನ್ನೋರ್ವ ಅಕ್ಷರ ದಾಸೋಹದ ಸಹಾಯಕ ನಿರ್ಧೇಶಕರಾದ ಎಂ.ಎA. ಬೆಳಗಲ್ ಅವರು ಮಾತನಾಡಿ ಬಾಲಭಾರತಿ ಶಾಲೆಯಲ್ಲಿ ನುರಿತ ವಿದ್ಯಾವಂತ ಶಿಕ್ಷಕರಿದ್ದಾರೆ ಅವರು ಕಲಿಸಿದ ಮಕ್ಕಳು ಉತ್ತುಂಗಕ್ಕೇರಲು ಕಾರಣವಾಗಿದೆ ಒಟ್ಟಿನಲ್ಲಿ ಬಾಲಭಾರತಿ ಶಾಲೆ ಈ ಹಿಂದಿನಿAದಲೂ ಮಾದರೀಯ ಶಾಲೆಯಾಗಿ ಮಾರ್ಪಟ್ಟಿದೆ ಎಂದರು.
ಇನ್ನೋರ್ವ ಅತಿಥಿ ಸಿ.ಆರ್.ಪಿ ರಾಜು ವಿಜಾಪೂರ ಅವರು ಮಾತನಾಡಿ ಬಾಲಭಾರತಿ ಸಂಭAದಿತ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಣ ಮಟ್ಟದಲ್ಲಿ ಅಷ್ಟೇ ಅಲ್ಲ ವಿವಿಧ ಕ್ರೀಡೆಗಳಲ್ಲಿಯೂ ಸಾಧನೆ ಮಾಡುತ್ತಾ ಸಾಗಿಬಂದಿದ್ದಾರೆ ಒಟ್ಟಿನಲ್ಲಿ ಈ ಶಾಲೆಯಲ್ಲಿ ಕಲಿಕೆಯೆಂಬುದು ಉತ್ತಮವಾಗಿದೆ ಎಂದರು.
ಜ್ಞಾನ ಭಾರತಿ ವಿಶ್ವಸ್ಥ ಸಮೀತಿಯ ಅಧ್ಯಕ್ಷ ಚಿದಂಬರ ಕರಮರಕರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ್ಞಾನಭಾರತಿ ವಿಶ್ವಸ್ಥ ಸಮೀತಿಯ ಪ್ರಧಾನ ಕಾರ್ಯದರ್ಶಿಯಾದ ಅಮರಸಿಂಗ್(ಬಾಬು) ಹಜೇರಿ ಹಾಗೂ ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ, ಕ್ಷೇತ್ರಸಮನ್ವಯ ಅಧಿಕಾರಿ ಆರ್.ಬಿ. ಧಮ್ಮೂರಮಠ, ಹಾಗೂ ಆಡಳಿತ ಮಂಡಳಿಯವರಾದ ವಾಸುದೇವ ಹೆಬಸೂರ, ಅರುಣ ಕನಕಗಿರಿ, ತಮ್ಮಣ್ಣ ದೇಶಪಾಂಡೆ, ಬಂಡು ಧಾಯಪುಲೆ, ಶಾಮ ಹಂಚಾಟೆ, ದಿನಕರ ಜೋಷಿ, ಹಾಗೂ ಮುಖ್ಯಗುರುವೃಂದದವರು ಹಾಗೂ ಶಿಕ್ಷಕ ಬಳಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ತಿತರಿದ್ದರು.
ಶಿಕ್ಷಕಿ ಶಶಿಕಲಾ ಕುಂಟೋಜಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಂತರ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಶಿಕ್ಷಕ ರಮೇಶ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕಿ ಸುಮಂಗಲಾ ಯಾಳವಾರ ನಿರೂಪಿಸಿದರು. ಶಿಕ್ಷಕ ಮಹೇಶ ಓದಿ ವಂದಿಸಿದರು.