
ಕೊಲ್ಹಾರ:ಜೂ.೫: ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬುಧವಾರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಪಿಎಸ್‌ಐ ಎಮ್ ಬಿ ಬಿರಾದಾರ ಮಾತನಾಡಿದರು.
ಹಬ್ಬಗಳು ಸಮಾಜದಲ್ಲಿ ಇರುವ ಎಲ್ಲಾ ಧರ್ಮದ ಸಹೋದರರು ಐಕ್ಯತೆಯಿಂದ ಒಬ್ಬರು ಇನ್ನೊಬ್ಬರನ್ನು ಗೌರವ ದಿಂದ ಕಾಣುತ್ತಾ ಸಂತೋಷ ದಿಂದ ಆಚರಿಸಿದಾಗ ಮಾತ್ರ ಹಬ್ಬದ ಮೌಲ್ಯ ಹೆಚ್ಚಾಗುತ್ತದೆ ಎಂದು ಕರವೇ ಅಧ್ಯಕ್ಷ ರವಿ ಗೊಳಸಂಗಿ ಮಾತನಾಡಿದರು.
ಯಾವ ಧರ್ಮ ಗ್ರಂಥಗಳು ಕೆಟ್ಟ ಆಚಾರ ವಿಚಾರಗಳನ್ನು ತಿಳಿಸುವುದಿಲ್ಲ ಒಳ್ಳೆಯ ಸಂಸ್ಕಾರಗಳನ್ನು ತಿಳಿಸುತ್ತವೆ ಆದ್ದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಹಬ್ಬವನ್ನು ಆಚರಿಸಿದರೆ ಶಾಂತಿ ನೆಮ್ಮದಿ ಹಬ್ಬದಿಂದ ದೊರೆಯುತ್ತದೆ ಎಂದು ಪಿಎಸ್‌ಐ ಎಮ್ ಬಿ ಬಿರಾದಾರ ಹೇಳಿದರು.
ಶಾಂತಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪಕಾಲಿ, ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಹನೀಫ್ ಮಕಾನದಾರ, ಮಾಜಿ ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ,ಪಟ್ಟಣ ಪಂಚಾಯಿತಿ ಸದಸ್ಯರಾದ, ತೌಶೀಪ ಗಿರಗಾಂವಿ,ಬನಪ್ಪ ಬಾಲಗೊಂಡ, ಎಮ್ ಆರ್ ಕಲಾದಗಿ,ದಶರಥ ಈಟಿ, ಯಮನೂರಿ ಮಾಕಾಳಿ, ಪಟ್ಟಣದ ಹಿರಿಯರು, ಯುವಕರು ಭಾಗವಹಿಸಿದ್ದರು.