
ವಿಜಯಪುರ , ಜ. 15:ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ವೇಳೆ ಪೆÇಲೀಸರು ಬಂಧಿಸಿದ್ದ ಆರು ಜನರಿಗೆ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಭಗವಾ ರೆಡ್ಡಿ, ಸಂಗನಬಸವ ಸ್ವಾಮೀಜಿ, ಬೋಗೇಶ ಸೋಲಾಪುರ್ ಹಾಗೂ ಸಿದ್ರಾಮ ಹಳ್ಳೂರ ಅವರಿಗೆ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.


























