
ಕಲಬುರಗಿ,ಮೇ.23: ಬಾದಮಿ ಅಮಾವಾಸ್ಯೆ ನಿಮಿತ್ತ ಮೇ.27 ರಂದು ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನಾ ಗೋಷ್ಠಿ ಜರುಗಲಿದೆ. ಅಂದು ಅಬ್ಬೇತುಮಕೂರಿನ ವಿಶ್ವರಾಧ್ಯ ಮಠದಲ್ಲಿ ರಾತ್ರಿ 8.30ಕ್ಕೆ 481ನೇ ಶಿವಾನುಭವ ಗೋಷ್ಠಿ ನಡೆಯಲಿದೆ.
ಡಾ. ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಧಾರ್ಮಿಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೇವರಗಿ ತಾಲೂಕಿನ ಶಾಖಾಪೂರ ವಿಶ್ವರಾಧ್ಯ ತಪೋವನ ಮಠದಲ್ಲಿ ರಾತ್ರಿ 8ಕ್ಕೆ 371ನೇ ಗೋಷ್ಠಿ ನಡೆಯಲಿದೆ. ಡಾ. ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವಿರೇಶ್ವರ ಹಿರೇಮಠ ಸಂಸ್ಥಾನದಲ್ಲಿ ರಾತ್ರಿ 8ಕ್ಕೆ 316ನೇ ಗೋಷ್ಠಿ ನಡೆಯಲಿದೆ. ಡಾ. ರೇವಣಸಿದ್ದ ಶಿವಾರ್ಚಾಯರು ನೇತೃತ್ವ ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಅಪ್ಪನ ಶಾಖಾ ಮಠದಲ್ಲಿ ಜೂನ 1 ರಂದು ರಾತ್ರಿ 8.50ಕ್ಕೆ 298ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೇತುಮಕೂರ ಮಠದ ಡಾ. ಗಂಗಾಧರ ಸ್ವಾಮೀಜಿರವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ನಗರ ಘಟಕದ ವಕ್ತಾರ, ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅವರು ತಿಳಿಸಿದ್ದಾರೆ.