
ಬೀದರ:ಮೇ.೫:ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಗೌರವಾಧ್ಯಕ್ಷರಾಗಿ ಬಾಬುರಾವದಾನಿ ಅವರುÀರ್ವಾನುಮತದಿಂದಆಯ್ಕೆಯಾಗಿದ್ದಕ್ಕೆಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹರುಷ ವ್ಯಕ್ತಪಡಿಸಿದೆ.ಬೆಂಗಳೂರು ಗ್ರಾಮಾಂತರಜಿಲ್ಲೆಯ ಹೊಸಕೋಟೆತಾಲ್ಲೂಕಿನ ಸೂಲಿಬೆಲೆಯಲ್ಲಿದಿನಾಂಕ ೦೧ ಮೇ ೨೦೨೬ ಕಾರ್ಮಿಕದಿನಾಚರಣೆ ಪ್ರಯುಕ್ತ “ಕಾಯಕಯೋಗಿ-೨೬’ಪ್ರಶಸ್ತಿ ಪ್ರಧಾನ ಸಮಾರಂಭ ದಿನದಂದು ನಡೆದಕಾರ್ಯಕಾರಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾದ ಬಗ್ಗೆ ಕ.ರಾ.ವೈ.ಸಂ. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಹುಲಿಕಲ್ ನಟರಾಜವರುಅಧೀಕೃತ ಪತ್ರ ನೀಡಿದ್ದಾರೆ.
ಶಿಕ್ಷಣ, ಸಮಾಜ, ವಿಶೇಷವಾಗಿ ವೈಜ್ಞಾನಿಕಕ್ಷೇತ್ರದಲ್ಲಿತಮ್ಮನ್ನುತಾವು ತೊಡಗಿಸಿಕೊಂಡು ಅವಿರತ ಶ್ರಮಿಸುತ್ತಿರುವದಾನಿ ಬಾಬುರಾವಅವರು ಪ್ರೌಢಶಾಲಾಶಿಕ್ಷಕರಾಗಿ ‘ರಾಜ್ಯ ಮಟ್ಟದಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದವರು. ಶಿಕ್ಷಕ ವೃತ್ತಿಯೊಂದಿಗೆ ಕಳೆದ ನಾಲ್ಕು ದಶಕಗಳಿಂದ ಸಮಾಜೋ-ಸಾಂಸ್ಕೃತಿಕ ಬದುಕಿನ ಸೇವೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡವರು. ವೃತ್ತಿಜೀವನದಿಂದ ನಿವೃತ್ತರಾದರೂ ಸಾಮಾಜಿಕ, ವೈಜ್ಞಾನಿಕ ಸೇವೆ ನಿರಂತರವಾಗಿವೆ.ಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತಿನಕೋಶಾಧ್ಯಕ್ಷರಾಗಿ, ನಿರ್ದೇಶಕರಾಗಿ, ಕಾರ್ಯಕಾರಿಣಿ ಸದಸ್ಯರಾಗಿ, ವಿಜ್ಞಾನ ಮತ್ತುತಂತ್ರಜ್ಞಾನ ಸಂವಹÀನ ಮಂಡಳಿ ನವದೆಹಲಿ ಕಾರ್ಯಕಾರಿಣಿ ಸದಸ್ಯರಾಗಿ, ಜಿಲ್ಲಾ ವಿಜ್ಞಾನ ಸಮಿತಿಯಗೌರವ ಕಾರ್ಯದರ್ಶಿಯಾಗಿ, ಉಪಪ್ರಾದೇಶಿಕ ವಿಜ್ಞಾನಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಪರಿಸರ ವಾಹಿನಿ ಗೌರವ ಸಲಹೆಗಾರರಾಗಿ, ಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಉಪಾಧ್ಯಕ್ಷರಾಗಿ, ಪಂಚಾಕ್ಷರಿ ಗವಾಯಿ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಹೀಗೆ ಆಯಾ ಹುದ್ದೆಗಳಿಗೆ ಗೌರವತಂದುಕೊಟ್ಟವರು.ಅನೇಕ ವೈಜ್ಞಾನಿಕ, ವೈಚಾರಿಕ ಬರಹಗಳಮೂಲಕ ಸಮಾಜದಲ್ಲಿ ಸದಭಿರುಚಿ ಮೂಡಿಸಿದ ಅವರುಕರ್ನಾಟಕರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಬೀದರಜಿಲ್ಲೆಯಾದ್ಯಂತ ‘ಭಾನಾಮತಿ ನಿರ್ಮೂಲನಾ ಆಂದೋಲನ’ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಮಾಜಿಕಜಾಗೃತಿಉಂಟು ಮಾಡಿದವರು ವಿಶೇಷವಾಗಿ ಬೀದರನಲ್ಲಿ ಉಪಪ್ರಾದೇಶಿಕ ವಿಜ್ಞಾನಕೇಂದ್ರ ನಿರ್ಮಿಸಿ ಅಂದಿನ ರಾಷ್ಟçಪತಿ ಎ.ಪಿ.ಜೆ. ಅಬ್ದುಲ್‌ಅವರಿಂದ ಲೋಕಾರ್ಪಣೆ ಮಾಡಿರುವಅವರ ಸೇವೆ ಅವಿಸ್ಮರಣೀಯ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಸಂಘಟಕ ಪ್ರಶಸ್ತಿ, ರಾಜ್ಯಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗಣರಾಜ್ಯೋತ್ಸವ ಪ್ರಶಸ್ತಿ, ವಿಜ್ಞಾನ ಮಿತ್ರರಾಜ್ಯ ಶಿಕ್ಷಕ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸನ್ಮಾನ. ಕರ್ನಾಟಕಅಕಾಡೆಮಿಆಫ್ ಮೆಥೆಮೆಟಿಕ್ಸ್ನಉತ್ತಮಗಣಿತ ಸಂಘಟಕÀ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳಿಗೆ ಭಾಜನರಾದವರು. ದಾನಿ ಬಾಬುರಾವಆಯ್ಕೆಯ ಬಗ್ಗೆ ಡಾ.ರಾಜನೇಶ್ ವಾಲಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶಚನಶೆಟ್ಟಿ, ಕಾರ್ಯದರ್ಶಿ ಎಂ.ಎಸ್. ಮನೋಹರ, ಕೋಶಾಧ್ಯಕ್ಷರಾದಡಾ. ಶಿವಶಂಕರ ಟೋಕರೆ, ತಾಲ್ಲೂಕು ಕಸಾಪ ಅಧ್ಯಕ್ಷಟಿ.ಎಂ.ಮಚ್ಚೆ, ಶಿವಕುಮಾರ್ ಕಟ್ಟೆ, ಬಸವರಾಜ ಬಲ್ಲೂರ, ಡಾ.ಸತೀಶ್ ಮಡುವಿ.ದೇವಿಪ್ರಸಾದ್‌ಕಲಾಲ್ ಪರಮೇಶ್ವರ್ ಸಂತೋಷ್ ಮಂಗಳೂರೇ ನರಸರೆಡ್ಡಿ ಮೊದಲಾದವರು ಹರುಷ ವ್ಯಕ್ತಪಡಿಸಿದ್ದಾರೆ.




























