
ಅಥಣಿ :ಏ.೭: ಹಸಿರು ಕ್ರಾಂತಿ ಹರಿಕಾರರು. ಭಾರತದ ಮಾಜಿ ಉಪಪ್ರಧಾನಮಂತ್ರಿ ಡಾ.ಬಾಬು ಜಗಜೀವನರಾಮ್ ಅವರ ಆದರ್ಶ, ಚಿಂತನೆಗಳು ಸರ್ವ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಅವರು ನಾಯಕತ್ವ. ಸಾಮಾಜಿಕ ಕಳಕಳಿ ಹಾಗೂ ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅವರು ಪಟ್ಟಣದ ಲೀಡಕರ್ ಕಾಲೋನಿಯಲ್ಲಿ
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ೧೧೯ನೇ ಜಯಂತಿ ಕಾರ್ಯಕ್ರಮವನ್ನು ಬಾಬುಜೀಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರು ಅಸ್ಪೃಶ್ಯತೆ ನಿವಾರಣೆ. ಶೋಷಿತರ ಸಮುದಾಯದ ಧ್ವನಿಯಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರು. ಕೇಂದ್ರದ ವಿವಿಧ ಇಲಾಖೆಗಳ ಸಚಿವರಾಗಿ ಅವರು ತೋರಿದ ದಕ್ಷತೆ ಇಂದಿನ ಆಡಳಿತಗಾರರಿಗೆ ಮಾದರಿ. ಕೃಷಿ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ದೇಶ ಆಹಾರ ಭದ್ರತೆ ಪಡೆಯಲು ಸಾಧ್ಯವಾಯಿತು ಎಂದು ಅವರು ದೇಶಕ್ಕಾಗಿ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಸಮಾಜದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗುವ ಕೆಲಸ ಮಾಡಬಾರದು ಅಂಬೇಡ್ಕರ್ ಅವರು ಹೇಳಿದಂತೆ ಹುಲಿ ಹಾಲು ಯಾರು ಕುಡಿತಾರೂ ಅವರು ಘರ್ಜಿಸಲೇಬೇಕು. ಶಿಕ್ಷಣ ಇದ್ದರೆ ಏನಾದರೂ ಸಾಧನೆ ಮಾಡಬಹುದು ಎಂದರು
ಈ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಆರಂಭ – ತಾಲೂಕಿನ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರೀಯ ವಿದ್ಯಾಲಯ ಈ ವರ್ಷದಿಂದಲೇ
ಆರಂಭವಾಗಿದ್ದು, ಪ್ರವೇಶ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರ ಸದುಪಯೋಗ ಪಡೆಯಬೇಕು. ಬರುವ ಜೂನ್ ತಿಂಗಳಲ್ಲಿ ಪೂರ್ವಭಾಗದ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಕಾರ್ಯಾರಂಭ ಮಾಡಲಿದೆ ಅದರ ಉದ್ಘಾಟನೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಆಗಮಿಸಲಿದ್ದು, ಅದೇ ಸಂದರ್ಭದಲ್ಲಿ ೫೦೮ ಕೋಟಿ ರೂಗಳ ವೆಚ್ಚದಲ್ಲಿ ಕೃಷಿ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಸುಮಾರು ೩೬ ಕೋಟಿ ರೂಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಸುಸಜ್ಜಿತ ವಸತಿ ಶಾಲೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಹಾರೂಗೇರಿಯ ಪ್ರಾಚಾರ್ಯ ಟಿ.ಎನ್.ವಂಟಗುಡಿ ಉಪನ್ಯಾಸ ನೀಡಿ ಮಾತನಾಡಿ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕರಾದ ಡಾ. ಬಾಬುಜಗಜೀವನರಾಂ ಅವರು ಶೋಷಿತರ ಆಶಾಕಿರಣರಾಗಿದ್ದಾರೆ. ಹುಟ್ಟು ಮತ್ತು ಬೆಳವಣಿಗೆ, ದಲಿತರ ಮತ್ತು ಶೋಷಿತರ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ದೇಶದ ಧೀಮಂತ ನಾಯಕರಾಗಿ ಮಾಡಿದ ಸುಧಾರಣೆಗಳ ಬಗ್ಗೆ ಬಣ್ಣಿಸಿದರು.
ಆನಂತರ ಕಳೆದ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹರಳಯ್ಯ ಸಮಾಜದ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿಲಿನರಾಜ ಯಳಮಲ್ಲೆ. ಬಸವರಾಜ ನಾಯಕ, ತಹಶೀಲ್ದಾರ್ ಸಿದರಾಯ ಭೋಸಗಿ. ಸಿಪಿಐ ಸಂತೋಷ ಹಳ್ಳೂರ. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ. ಪಿಎ??? ಗಿರಿಮಲ್ಲಪ್ಪ ಉಪ್ಪಾರ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ. ಕೃಷಿ ಅಧಿಕಾರಿ ನಿಂಗನಗೌಡ ಬಿರಾದಾರ. ಮುಖ್ಯಾಧಿಕಾರಿ ಅಶೋಕ ಗುಡಿಮನಿ. ಜಿಪಂ ಅಧಿಕಾರಿ ಈರಣ್ಣಾ ವಾಲಿ. ಆರೋಗ್ಯಾಧಿಕಾರಿ ಬಸಗೌಡಾ ಕಾಗೆ. ನೀರಾವರಿ ಇಲಾಖೆಯ ಪ್ರವೀಣ ಹುಣಸಿಕಟ್ಟಿ. ಪಿಡಬ್ಲ್ಯೂಡಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್. ಸಿಡಿಪಿಓ ಮಂಜುನಾಥ ಸೌಂದಲಗೀಕರ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ. ಹರಳಯ್ಯ ಸಮಾಜದ ಅಧ್ಯಕ್ಷ ಸದಾಶಿವ ಶಿಕರೆ. ಶೇಖರ ಸೌದಾಗರ. ದಿಲೀಪ ಕಾಂಬಳೆ, ಡಾ. ಅನಿಲ್ ಸೌದಾಗರ, ಸುಂದರ ಸೌದಾಗರ, ಶಿವರಾಯ ಸಣ್ಣಕ್ಕಿ, ಮಹಾಂತೇಶ ಬಾಡಗಿ. ಮಂಜು ಹೋಳಿಕಟ್ಟಿ. ಶಿವಾನಂದ ಸೌದಾಗರ. ಆಸೀಫ್ ತಾಂಬೋಳಿ. ಮಚ್ಚೇಂದ್ರ ಕಾಂಬಳೆ. ಸಂತೋಷ ಹೊನಕಾಂಡೆ. ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಪರಶುರಾಮ ಪತ್ತಾರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚಡದ ನಿರೂಪಿಸಿದರು. ಲಕ್ಷ್ಮಣ ಜಯಗುಣಿ ವಂದಿಸಿದರು.






















