ಭೀಮಣ್ಣ ಖಂಡ್ರೆ ನಿಧನಕ್ಕೆ ಬಾಬು ವಾಲಿ ಸಂತಾಪ

ಬೀದರ:ಜ.೧೯:ಲೋಕನಾಯಕ, ಮಾಜಿ ಸಚಿವರು, ಏಕೀಕರಣ ರೂವಾರಿಗಳಾದ ದಿ. ಡಾ. ಭೀಮಣ್ಣ ಖಂಡ್ರೆ ಅವರೊಂದಿಗೆ ಆತ್ಮೀಯ ಒಡನಾಡ ಇತ್ತು ಎಂದು ರಾಜ್ಯ ಭಾರತೀಯ ಬಸವ ದಳದ ರಾಜ್ಯಾಧ್ಯಕ್ಷರು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಾಬು ವಾಲಿ ಅವರು ಸ್ಮರಿಸಿ, ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನನ್ನೊಂದಿಗೆ ಅಷ್ಟೇ ಅಲ್ಲದೆ, ನನ್ನ ತಂದೆಯವರಾದ ಕಾಶಪ್ಪ ವಾಲಿ ಅವರೊಂದಿಗೂ ಭೀಮಣ್ಣ ಖಂಡ್ರೆ ಅವರು ಉತ್ತಮ ಸಂಪರ್ಕ ಹೊಂದಿದ್ದರು. ನನ್ನ ತಂದೆ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷರಾಗಿದ್ದರು. ಹೀಗಾಗಿ ನಮ್ಮ ಕುಟುಂಬದೊAದಿಗೆ ಅವರಿಗೆ ಉತ್ತಮ ಒಡನಾಟ ಇತ್ತು ಎಂದು ಸ್ಮರಿಸಿದ್ದಾರೆ.
ಕಳೆದ ೩೩ ವರ್ಷಗಳ ಹಿಂದೆ ವಚನ ಕ್ರಾಂತಿ ಪತ್ರಿಕೆಯನ್ನು ಭೀಮಣ್ಣ ಖಂಡ್ರೆ ಅವರೇ ಉದ್ಘಾಟಿಸಿದ್ದರು. ನಂತರದ ದಿನಗಳಲ್ಲಿ ವಚನ ಕ್ರಾಂತಿ ಆಫ್ ಸೆಟ್ ಅನ್ನು ಸಚಿವರಾದ ಈಶ್ವರ್ ಖಂಡ್ರೆ ಲೋಕಾರ್ಪಣೆ ಮಾಡಿದ್ದರು. ನನಗೂ, ಭಾಲ್ಕಿಯ ಹಿರೇಮಠ ಸಂಸ್ಥಾನಕ್ಕೂ ಅವಿನಾಭಾವ ಸಂಬAಧ ಹಿನ್ನೆಲೆಯಲ್ಲಿ ಖಂಡ್ರೆ ಅವರೊಂದಿಗೂ ಉತ್ತಮ ಒಡನಾಟ ಕಡೆಯವರೆಗೂ ಇತ್ತು ಎಂದು ಬಾಬು ವಾಲಿ ನೆನಪಿಸಿದ್ದಾರೆ.
ಭಾರತೀಯ ಬಸವ ಬಳಗದ ರಾಜ್ಯ ಘಟಕದಿಂದ ದಿ. ಭೀಮಣ್ಣ ಖಂಡ್ರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಭೀಮಣ್ಣ ಖಂಡ್ರೆ ಅವರು ರಾಜಕೀಯದೊಂದಿಗೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ ಬೀದರ್ ಜಿಲ್ಲೆಗೆ ಅವರ ಕೊಡುಗೆ ಅಪಾರವಾಗಿದೆ ಎಂದಿದ್ದಾರೆ.
ಭೀಮಣ್ಣ ಖಂಡ್ರೆ ಅವರ ನಿಧನದಿಂದ ಜಿಲ್ಲೆಗೆ ನಷ್ಟವಾಗಿದೆ. ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುವೆ.

— ಬಾಬು ವಾಲಿ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಹಾಗೂ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು