
ಕಾಳಗಿ:ಜ.೨೬:ದೇಶದ ೭೭ನೇ ಗಣರಾಜ್ಯೋತ್ಸವವನ್ನು ತಾಲೂಕಿನಾದ್ಯಂತ ಭಕ್ತಿಭಾವ, ದೇಶಪ್ರೇಮ ಮತ್ತು ಸಡಗರ-ಸಂಭ್ರಮದೊAದಿಗೆ ಆಚರಿಸಲಾಯಿತು.ತಾಲೂಕು ಆಡಳಿತದಿಂದರಾಷ್ಟ್ರಧ್ವಜಾರೋಹಣ ನೆರವೇರಿಸಿ, ಮಾತನಾಡಿದಶಾಸಕ ಡಾ.ಅವಿನಾಶ ಜಾಧವ
ಅವರು, ನಮ್ಮ ಭವ್ಯ ಭಾರತಕ್ಕೆ ದಿವ್ಯ ಸಂವಿಧಾನವನ್ನು ನೀಡಿದ ಮಹಾ ಚೇತನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಎಂದು ನೆನೆದರು.
ಭಾರತೀಯ ಸಂವಿಧಾನದ ಮೌಲ್ಯಗಳು ದೇಶದ ಏಕತೆ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭದ್ರತೆಗೆ ಮೂಲಸ್ತಂಭವಾಗಿವೆ ಎಂದರು. ಗ್ರೇಡ್-೧ತಹಸೀಲ್ದಾರ ಪೃಥ್ವಿರಾಜ ಪಾಟೀಲ ಮಾತನಾಡಿದರು.
ಪಟ್ಟಣದ ಶಿವಬಸವೇಶ್ವರ ಶಾಲೆಯಲ್ಲಿ ನೀಲಕಂಠ ಮರಿದೇವರು, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಅರುಣಾಬಾಯಿ, ಸಾರ್ವಜನಿಕ ಗ್ರಂಥಾಲಯದಲ್ಲಿ ಶಿವಶರಣಪ್ಪ ಕಮಲಾಪೂರ, ಕಾಳೇಶ್ವರ ಪದವಿ ಕಾಲೇಜಿನಲ್ಲಿ ಸಂಗಪ್ಪ ಅರಣಕಲ್, ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಪಂಕಜಾ ಎ, ತಾಪಂ.ಕಛೇರಿಯಲ್ಲಿ ಬಸಲಿಂಗಪ್ಪ ಡಿಗ್ಗಿ, ಆರಕ್ಷಕ ವೃತ್ತ ನಿರಿಕ್ಷಕರ ಕಾರ್ಯಾಲಯದಲ್ಲಿ ಸಿಪಿಐ ಜಗದೇವಪ್ಪ ಪಾಳಾ, ಪಶುಚಿಕಿತ್ಸಾಲಯದಲ್ಲಿ ಡಾ.ಗೌತಮ ಕಾಂಬ್ಳೆ, ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಡಾ.ಅಮರೇಶ, ಎಸ್.ಬಿ.ಐ ಬ್ಯಾಂಕ್ ನಲ್ಲಿ ಚಂದ್ರಶೇಖರ, ಜಗದ್ಗುರು ಶ್ರೀರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಂಡಿತ ಮಾಳಗೆ, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಶೈಲಪ್ಪ ಬೋನಾಳ, ಸರಕಾರಿ ಪ್ರೌಢಶಾಲೆಯಲ್ಲಿ ಮಹೇಶ ಬಡಿಗೇರ, ಪೋಲಿಸ್ ಠಾಣೆಯಲ್ಲಿ ಪಿಎಸ್ ಐ ತಿಮ್ಮಯ್ಯ ಬಿಕೆ, ರೈತ ಸಂಪರ್ಕ ಕೇಂದ್ರದಲ್ಲಿ ಸರೋಜಾ ಕಲಬುರಗಿ, ಪಿಡಬ್ಲ್ಯೂಡಿ ಕಛೇರಿಯಲ್ಲಿ ಎಇಇ ಪ್ರಜ್ಞಾಶೀಲ ಗಂಜಗೀರಿ, ಪಿ.ಆರ್. ಇ ಕಾರ್ಯಾಲಯದಲ್ಲಿ ನಾಗಮೂರ್ತಿ, ಡಿ.ಎಮ್ ಮಾಲಿಪಾಟೀಲ ಕಾಲೇಜಿನಲ್ಲಿ ಪ್ರಾಂಶುಪಾಲೆ ಚಂದನ ಪಾಟೀಲ, ಕಾವೇರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಿದ್ದರೆಡ್ಡಿ ಸಂಗೋಳಗಿ, ಚಾಮುಂಡೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಮೇಶ ನಾಮದಾರ, ಶಶಿಕಲಾ ವಿದ್ಯಾಮಂದಿರದಲ್ಲಿ ಡಾ.ಮಲ್ಲಿಕಾರ್ಜುನ ಗಾಜರೆ, ಸಿದ್ಧಾರ್ಥ ಪಿಯು ಕಾಲೇಜಿನಲ್ಲಿ ಅವಿನಾಶ ಮೂಲಿಮನಿ, ಕಾಂಗ್ರೇಸ್ ಕಛೇರಿ ಯಲ್ಲಿ, ದೇವಿಂದ್ರಪ್ಪ ಸಾಲಹಳ್ಳಿ, ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಡಾ.ಅವಿನಾಶ ಜಾಧವ ಧ್ವಜಾರೋಹಣ ಮಾಡಿದರು.ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
























