Home ಜಿಲ್ಲೆ ಕಲಬುರಗಿ ಕರುನಾಡಿನ ಇತಿಹಾಸದ ಪುಟ ತೆರೆಯುವ ಬಬಲಾದ ಗ್ರಾಮದ ಶಾಸನ, ದೇಗುಲಗಳು : ಮುಡುಬಿ ಗುಂಡೇರಾವ

ಕರುನಾಡಿನ ಇತಿಹಾಸದ ಪುಟ ತೆರೆಯುವ ಬಬಲಾದ ಗ್ರಾಮದ ಶಾಸನ, ದೇಗುಲಗಳು : ಮುಡುಬಿ ಗುಂಡೇರಾವ

ಕಲಬುರಗಿ:ಮೇ.21: ಕರುನಾಡಿನ ಇತಿಹಾಸದ ಪುಟ ತೆರೆಯುವ ಬಬಲಾದ ಗ್ರಾಮದ ಶಾಸನ, ದೇಗುಲ, ಸ್ಮಾರಕಗಳ ರಕ್ಷಣೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಂಶೋಧಕ ಸಾಹಿತಿ ಮತ್ತು ಕಲಬುರಗಿ ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ಜಿಲ್ಲೆಯ ಕಮಲಾಪೂರ ತಾಲೂಕಿನ ಬಬಲಾದ ಗ್ರಾಮದ ಐತಿಹಾಸಿಕ ಮಲ್ಲಿಕಾರ್ಜುನ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ (51) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕನ್ನಡಿಗರ ಶೌರ್ಯ, ಪರಾಕ್ರಮತೆ, ಕಲೆ, ಸಾಹಿತ್ಯ, ಸಂಗೀತ, ಆಡಳಿತ, ಸಾಮಾಜಿಕ, ಆರ್ಥಿಕ, ಧರ್ಮ ಆಧ್ಯಾತ್ಮದ ಸಾಧನೆಗಳ ಕುರಿತು ಇಲ್ಲಿಯ ಶಾಸನ, ದೇಗುಲಗಳು, ಶಿಲ್ಪಗಳು ತಿಳಿಸಿಕೊಡುತ್ತವೆ. ಮನ್ನೆದಡಿ ಸಾಸಿರ (ಆಳಂದ) ನಾಡು ಎಂದರೆ ಅಂದಿನ ಕಾಲದಲ್ಲಿ ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿತ್ತು. ಅದರ ವ್ಯಾಪ್ತಿಗೆ ಸೇರಿದ ಬಬಲಾದ ಗ್ರಾಮವು ಒಂದು ಸಾವಿರ ವರ್ಷಗಳ ಹಿಂದೆ ಬಬಲದ ಗ್ರಾಮವು ಶೈಕ್ಷಣಿಕ ವಿದ್ಯಾಕೇಂದ್ರವಾಗಿ ಮೆರೆದಿತ್ತು. ಈ ಭಾಗದಲ್ಲಿ ಬೆಳೆದ ಸಾಮಭರ ಪದಾರ್ಥಗಳಿಗೆ ಹೊರನಾಡಿನಲ್ಲಿ ಭಾರಿ ಬೇಡಿಕೆ ಇತ್ತು. ಮೆಣಸು, ದಾಲಿಚಿನ, ಜೀರಗೆ, ಉತ್ತತ್ತಿ ಮುಂತಾದ ಬೆಳೆಗಳನ್ನು ಇಲ್ಲಿಯ ಅನ್ನದಾತರು ಬೆಳೆಯುತ್ತಿgದ್ದರು ಎಂದು ಶಾಸನಗಳಿಂದ ತಿಳಿದುಬರುತ್ತದೆ. ಪ್ರಾಚೀನ ಕನ್ನಡಿಗರ ಸಾಧನೆಗಳ ಕುರಿತು ನೈಜ ಇತಿಹಾಸ ತಿಳಿಸುವ ಈ ದೇಗುಲಗಳು, ಶಾಸನ, ಶಿಲ್ಪಗಳ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್ ಬಿ ಪಾಟೀಲ ಮಾತನಾಡಿ ಪ್ರಾಚೀನ ಜನಾಂಗದ ಇತಿಹಾಸ ಪಳವಳಿಕೆ, ದೇಗುಲಗಳ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಕಳೆದ ಎರಡುವರೆ ವರ್ಷಗಳಿಂದ ನಮ್ಮ ಬಳಗ ಐತಿಹಾಸಿಕ ಜಾಗೃತಿ ಮೂಡಿಸಲಾಗುತ್ತದೆ. ಪರಿಣಾಮ ಅನೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸ್ಮಾರಕಗಳನ್ನು ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾಜ ಸೇವಕ ಶಿವಯೋಗೆಪ್ಪ ಬಿರಾದಾರ ಪ್ರಮುಖರಾದ ಧೂಳಯ್ಯ ಸ್ವಾಮಿ, ಅನಿಲಕುಮಾರ, ಶರಣು, ಭಗವಂತ, ನೈತಿಕ, ಚನ್ನವೀರ, ಅಖಿಲೇಶ, ರಿಶೀಕುಮಾರ ಮುಂತಾದವರಿದ್ದರು.

ಪ್ರಾಚೀನ ಕಾಲದಲ್ಲಿ ಬಬಲಾದ ಗ್ರಾಮವು ಆಲಂದಿ ಸಾಸಿರ ನಾಡಿಗೆ ಸೇರಿತ್ತು. ಗ್ರಾಮದಲ್ಲಿರುವ ಮಲ್ಲಿಕಾರ್ಜುನ(ಮಲ್ಕಣ) ದೇವಾಲಯ ಮತ್ತು ಶಾಸನ, ಶಿಲ್ಪಗಳು ಕರುನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಕನ್ನಡಿಗರ ರೋಚಕ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಗತಕಲಾದಲ್ಲಿ ಬಬಲಾದ ಗ್ರಾಮವು ಶೈಕ್ಷಣಿಕ, ಧರ್ಮ, ಆಧ್ಯಾತ್ಮದ ತವರೂರಾಗಿತ್ತು. ಅಳಿವಿನ ಅಂಚಿನಲ್ಲಿರುವ ಬಬಲಾದ ಗ್ರಾಮದ ದೇಗುಲ, ಶಾಸನ ಶಿಲ್ಪಗಳ ರಕ್ಷಣೆ ಅವಶ್ಯವಾಗಿದೆ.
ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿಗಳು ಮತ್ತು ಸಮ್ಮೇಳನಾಧ್ಯಕ್ಷರು ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನ ಕಲಬುರಗಿ