Home ಜಿಲ್ಲೆ ಕಲಬುರಗಿ ಬಾಬಾ ಅಮ್ಟೆಯವರ ಸಾಮಾಜಿಕ ಕೊಡುಗೆ ಅಪಾರ

ಬಾಬಾ ಅಮ್ಟೆಯವರ ಸಾಮಾಜಿಕ ಕೊಡುಗೆ ಅಪಾರ

ಕಲಬುರಗಿ :ಫೆ.9: ಮುರಲೀಧರ ದೇವಿದಾಸ್ ಅಮ್ಟೆ(ಬಾಬಾ ಅಮ್ಟೆ) ಅವರು ಕುಷ್ಠರೋಗ ಪೀಡಿತರ ಪುನರ್ವಸತಿ, ಬುಡಕಟ್ಟು ಜನಾಂಗದ ಸಬಲೀಕರಣ, ಪರಿಸರ ಸಂರಕ್ಷಣೆಯ ನರ್ಮದಾ ಬಚಾವ್ ಆಂದೋಲನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಸಾಮಾಜಿಕ ಕಾರ್ಯಕರ್ತರಾಗಿದ್ದರು. ‘ಆನಂದವನ’ ಎಂಬ ವಿಕಲಚೇತನರ ಪುನರ್ವಸತಿ ಕೇಂದ್ರ ಸ್ಥಾಪಿಸಿ, ಅಸಂಖ್ಯಾತ ಬಡವರಿಗೆ ಸೇವೆ ಸಲ್ಲಿಸಿ, ರಾಷ್ಟ್ರೀಯ ಏಕತೆಗಾಗಿ ಶ್ರಮಿಸುವ ಮೂಲಕ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಬಾಬಾ ಅಮ್ಟೆಯವರ 18ನೇ ಪುಣ್ಯಸ್ಮರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕನ್ಯಾಕುಮಾರಿದಿಂದ ಕಾಶ್ಮೀರ ಮತ್ತು ಅಸ್ಸಾಂನಿಂದ ಗುಜರಾತ್ ವರೆಗೆ ಜಾಥಾಗಳ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಿದರು. ಮಹಾತ್ಮ ಗಾಂಧೀಜಿಯವರ ತತ್ವಗಳಾದ ಗುಡಿ ಕೈಗಾರಿಕೆಗಳು, ಗ್ರಾಮ ಸ್ವರಾಜ್ಯ, ಜನಸಾಮಾನ್ಯರ ಸಬಲೀಕರಣ ಮತ್ತು ಬಡವರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಬಂಗರಗಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು