ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿ ಅವರ ವಯೋನಿವೃತ್ತಿ

ಬೀದರ:ಅ.೬: ನಗರದ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ.(ಮೇಜರ) ಪಿ. ವಿಠ್ಠಲ ರಡ್ಡಿ ಅವರ ವಯೋನಿವೃತ್ತಿ ಸಮಾರಂಭವನ್ನು ಬೀದರ ವಿಶ್ವವಿದ್ಯಾಲಯ ಬೀದರ ಕುಲಪತಿಗಳಾದ ಡಾ. ಬಿ.ಎಸ್. ಬಿರಾದಾರ ಅವರ ಅಮೃತ ಹಸ್ತದಿಂದ ಜ್ಯೋತಿ ಬೆಳಗುವುದರೊಂದಿಗೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರಡ್ಡಿಯವರು ತಮ್ಮ ಅವಧಿಯಲ್ಲಿ ಚಾಚುತಪ್ಪದೇ ತಮ್ಮ ವಿದ್ಯಾರ್ಥಿಗಳ ಏನಾದರು ಸಮಸ್ಯೆಗಳು ಇದ್ದರೇ ತಕ್ಷಣ ಗುಲಬಗಾ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ಬೀದರ ವಿಶ್ವವಿದ್ಯಾಲಯ ಬೀದರಿಗೆ ಕರೆ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ಚಾಣಾಕ್ಷತನ ಅವರಲ್ಲಿದೆ ವಿಶ್ವವಿದ್ಯಾಲಯದ ಯಾವುದೇ ಕಾರ್ಯಗಳು ಇದ್ದರು ತಮ್ಮ ಮಹಾವಿದ್ಯಾಲಯ ಸಹಾಯಹಸ್ತಕ್ಕೆ ಯಾವುದೇ ಸಮಯದಲ್ಲಿ ಸದಾಸಿದ್ದ ಎಂದು ಹೇಳಿಕೊಳ್ಳುವ ಛಲಗಾರಿಕೆ ಅವರಲ್ಲಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಉತ್ತರ ಕರ್ನಾಟಕ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಿರಿಯ ಜೀವಿ ಶ್ರೀ ಶಿವಶರಣಪ್ಪಾ ವಾಲಿಯವರು ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವಲ್ಲ ಈ ಭಾಗದಲ್ಲಿ ಅನೇಕ ಜನ ಬುದ್ಧಿಜೀವಿಗಳು ಇದ್ದಾರೆ ಆದರೆ ಇಲ್ಲಿನ ವಿಶ್ವವಿದ್ಯಾಲಯಗಳಿಗೆ ಸರ್ಕಾರದಿಂದ ಅನುದಾನದ ಕೊರತೆಯಿದೆ. ಈ ಭಾಗದ ಶಾಸಕರು, ಮಂತ್ರಿಗಳು ವಿಧಾನ ಸಭೆಯಲ್ಲಿ ಧ್ವನಿ ಎತ್ತಿದಾಗ ಮಾತ್ರ ನಮ್ಮ ಭಾಗಕ್ಕೆ ಅನುದಾನ ಬರಲು ಸಾಧ್ಯ ಆಗ ನಮ್ಮ ವಿದ್ಯಾರ್ಥಿಗಳಿಗೆ ೩೭೧(ಜೆ) ಪ್ರಕಾರ ಹಲವಾರು ಸವಲತ್ತುಗಳು ದೊರೆತು ವಿದ್ಯಾರ್ಜನೆ ಮತ್ತು ಹುದ್ದೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪಾ ಸಿಕೆನಪುರ ಅವರು ಮಾತನಾಡುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಸೈನಿಕ ಶಾಲೆಯಲ್ಲಿ ದಾಖಲಾತಿ ಪಡೆದು ಮುಂದೆ ಸೈನ್ಯದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ ನಮ್ಮ ಭಾಗದಲ್ಲಿ ಕೊರತೆ ಏನೆಂದರೆ ಈ ಭಾಗದಿಂದ ಯಾವುದೇ ವಿದ್ಯಾರ್ಥಿ ಪೈಲೆಟ್ ಆಗಿಲ್ಲ ನಮ್ಮಂತಹ ಶಿಕ್ಷಣ ಸಂಸ್ಥೆಗಳು ಅವರಿಗೆ ತರಬೇತಿಕೊಟ್ಟು ಉನ್ನತ ಹುದ್ದೆ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಗುಲಬರ್ಗಾ ವಿಶ್ವಿವಿದ್ಯಾಲಯ ಕಲಬುರಗಿ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ರಾಜ್ಯಾಧ್ಯಕ್ಷರಾದ ಡಾ. ಚಂದ್ರಶೇಖರ ಪಾಟೀಲ ಅವರು ಮಾತನಾಡುತ್ತಾ ರಡ್ಡಿಯವರು ಸಮಯ ಪಾಲನೆ ಶಿಸ್ತು, ಹಾಗೂ ಕಾರ್ಯಕ್ಷಮತೆಗೆ ಹೆಸರುವಾಸಿಯಾದವರು ಜಂಟಿ ನಿರ್ದೇಶಕರ ಕಛೇರಿ, ವಿಶ್ವವಿದ್ಯಾಲಯದ ಕಾರ್ಯಕಲಾಪಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳು ಯಾವುದೇ ಇದ್ದರು ತಕ್ಷಣ ಸ್ಪಂದಿಸುವವರು ಹಾಗೂ ದಯಾಳುಗಳು ಇವರ ಮಾರ್ಗದರ್ಶನದಲ್ಲಿ ನ್ಯಾಕನಿಂದ ‘ಎ’ ಪಡೆದುಕೊಂಡಿದೆ ಎಂದು ಮಾರ್ಮಿಕ ನುಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಡಾ. ಕಿಣ್ಣಿಯವರು ಮಾತನಾಡುತ್ತಾ ರಡ್ಡಿಯವರ ವಿಶಾಲ ಹೃದಯ ಅವರನ್ನು ಆಕಾಶದೇತ್ತರಕ್ಕೆ ಇವರ ಕೀರ್ತಿ ಹರಡಿದೆ ಅವರ ನನ್ನ ಸÀಹೃದಯಿಗಳು ಸದಾ ಮಹಾವಿದ್ಯಾಲಯದ ಕೀರ್ತಿ ಯಶಸ್ಸಿಗೆ ಸದಾ ಅವರ ಹೃದಯ ತೆರದುಕೊಳ್ಳುವಂತಹದು ಎಂದು ಅವರ ಬಗ್ಗೆ ಸದಾಶಯ ವ್ಯಕ್ತÀಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಡಾ.(ಮೇಜರ) ಪಿ. ವಿಠ್ಠಲರಡ್ಡಿಯವರು ಮಾತನಾಡುತ್ತಾ ನಮ್ಮ ಈ ಮಹಾವಿದ್ಯಾಲಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳನ್ನು ಉನ್ನತ ಹುದ್ದೆ ಪಡೆದುಕೊಳ್ಳಲು ನಮ್ಮಲ್ಲಿ ಗ್ರಂಥಾಲಯದ ಸೌಲಭ್ಯವಿದೆ ಹಾಗೂ ಎನ್.ಸಿ.ಸಿ., ಎನ್.ಎಸ್.ಎಸ್. ಮುಖಾಂತರ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿ ಉನ್ನತ ಹುದ್ದೆ ಪಡೆಯಲು ಅವಕಾಶವಾಗುತ್ತದೆ ಎಂದು ನುಡಿದರು ಹಾಗೂ ಈ ಮಹಾವಿದ್ಯಾಲಯ ನನಗೆ ಸಮಾಜದಲ್ಲಿ ಅತೀ ಉನ್ನತ ಸ್ಥಾನಕ್ಕೆ ಕೊಂಡ್ಯೋದಿದೆ ಎಂದು ತಮ್ಮ ಮನದಾಳದ ಮಾತನ್ನು ನುಡಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಶಾಲಾ ಕಾಲೇಜುಗಳ ಆವರಣದ ಅಭಿವೃದ್ಧಿ ಮಂಡಳಿ ಸಂಚಾಲಕರಾದ ಡಾ. ರಜನೀಶ ಎಸ್. ವಾಲಿಯವರು ಮಾತನಾಡುತ್ತಾ ರಡ್ಡಿಯವರು ಸಮಯ ಪಾಲನೆ ಶಿಸ್ತು, ದಯಾಳು ಹಾಗೂ ಸದಾ ಮಹಾವಿದ್ಯಾಲಯದ ಕಾರ್ಯಕ್ಕೆ ಸಮಯಕೊಡುವಂತಹ ದಕ್ಷ ಅಧಿಕಾರಿಗಳು ಇಂತಹ ವ್ಯಕ್ತಿಗಳು ಸಮಾಜಕ್ಕೆ ಆದರ್ಶವಾಗಿದ್ದಾರೆ ಹೈ.ಕ.ಶಿ. ಹಾಗೂ ಮಹಾವಿದ್ಯಾಲಯಕ್ಕೆ ಮಾದರಿ ಇವರ ನಿವೃತ್ತಿ ಜೀವನ ಸದಾ ಸುಖಸಂತೋಷದಿAದ ತುಂಬಿರಲಿ ಎಂದು ದೂರವಾಣಿ ಕರೆ ಮುಖಾಂತರ ಮಾರ್ಮಿಕವಾಗಿ ನುಡಿದರು ಹಾಗೂ ಹೈ.ಕ.ಶಿ. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಾ ಭೀಮಳ್ಳಿಯವರು ದೂರವಾಣಿ ಕರೆ ಮುಖಾಂತರ ಡಾ. ಪಿ. ವಿಠ್ಠಲ ರಡ್ಡಿ ನಿವೃತ್ತಿ ಜೀವನ ಅತ್ಯಂತ ಸುಖಕರ ಹಾಗೂ ಸಂತೋಷದಿAದ ತುಂಬಿರಲಿ ದೇವರು ಅವರಿಗೆ ಆಯುಷ್ಯ ಆರೋಗ್ಯಕೊಟ್ಟು ಕರುಣಿಸಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಬಗ್ಗೆ ಅನಿಸಿಕೆಗಳನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ, ರಸಾಯನಶಾಸ್ತç ವಿಭಾಗ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಕೋಟೆ, ಡಾ. ಅನುಸುಯಾ ಪಾಟೀಲ, ರಡ್ಡಿಯವರ ಸುಪುತ್ರಿಯಾದ ಡಾ. ಶ್ವೇತಾ ರಡ್ಡಿ, ನಿಕಟಪೂರ್ವ ನಿವೃತ್ತ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಹಾಗೂ ಕಛೇರಿಯ ಅಧೀಕ್ಷಕರಾದ ಶ್ರೀ ಸುಜೀತಕುಮಾರ ಪಿ. ಹೇಳಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ರಡ್ಡಿಯವರ ಪಿ.ಹೆಚ್‌ಡಿ. ಮಾರ್ಗದರ್ಶಕಾರಾದ ಡಾ. ಎಂ.ಬಿ.ಹಳ್ಳಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಸ್ವಾಗತ ಗೀತೆಯನ್ನು ಶ್ರೀಮತಿ ರೇಣುಕಾದೇವಿ ಸ್ವಾಮಿ ಹಾಡಿದರೆ, ಸ್ವಾಗತವನ್ನು ಡಾ. ಸೂರ್ಯವಂಶಿ ಪೂಜಾ ನಡೆಸಿಕೊಟ್ಟರೆ ಪ್ರಾಸ್ತಾವಿಕ ನುಡಿಯನ್ನು ಡಾ. ಶಿವಲೀಲಾ ವೀರಯ್ಯಾ ಹೇಳಿದರೆ, ಸಂಚಾಲಯನ್ನು ಇತಿಹಾಸ ವಿಭಾಗದ ಉಪನ್ಯಾಸಕರಾದ ಶ್ರೀ ಬಸವರಾಜ ಬಿರಾದಾರ ನಡೆಸಿಕೊಟ್ಟರೆ ವಂದನೆಯನ್ನು ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಾರುತಿ ಭೀಮಣ್ಣಾನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಬೀದರ ಮತ್ತು ಕಲಬುರಗಿಯ ಜಿಲ್ಲೆಯ ವಿವಿಧ ಮಹಾವಿದ್ಯಾಲಯದ ಪ್ರಾಂಶುಪಾಲರು, ಪ್ರಾಧ್ಯಾಪಕರು, ಶಿಕ್ಷಕರು, ಸಂಬAಧಿಕರು, ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.