
ತುಮಕೂರು, ಜು. ೫- ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಭಾರತ ರತ್ನ ಪ್ರಶಸ್ತಿ ಪಡೆದ ಡಾ. ಭಿದಾನ್ ಚಂದ್ರರಾಯ್ ಅವರನ್ನು ಇಂದಿನ ವೈದ್ಯರು ಆದರ್ಶವಾಗಿಟ್ಟುಕೊಂಡು ಸೇವೆ ಮಾಡಬೇಕು. ಹಿರಿಯರಾದ ಡಾ.ಬಿ.ಸಿ.ರಾಯ್ ರವರು ಹಾಕಿಕೊಟ್ಟ ಮಾರ್ಗದರ್ಶನ, ಜೀವನ ಶೈಲಿ, ರಾಜಕೀಯವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಗಳನ್ನು ಸ್ಮರಿಸುವುದು ಅದೇ ದಾರಿಯಲ್ಲಿ ನಮ್ಮ ವೈದ್ಯರು ಮತ್ತು ವೈದ್ಯಕೇತರ ಸಿಬ್ಬಂದಿಗಳು ಕೆಲಸ ನಿರ್ವಹಿಸುವುದು ಹೆಚ್ಚು ಸೂಕ್ತವಾಗಿದೆ. ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ದೊರಕುವಂತೆ ಸೇವೆ ನಿರ್ವಹಿಸಬೇಕು ಎಂದು ಆದಿತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ಪ್ರಜ್ಞೆ ಡಾ. ಕೆ.ಜಿ. ಲಿಖಿತಾ ಹೇಳಿದರು.
ನಗರದ ಸಿರಾಗೇಟ್‌ನ ಅದಿತಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಮತ್ತು ಬದಲಾವಣೆಗೆ ಡಾ.ಬಿ.ಸಿ.ರಾಯ್ ಕೊಟ್ಟ ಕೊಡುಗೆ ಅನನ್ಯವಾಗಿದೆ ಎಂದರು.
ಅದಿತಿ ಆಸ್ಪತ್ರೆಯ ವ್ಯವಸ್ಥಾಪಕ ನಿದೇಶಕ ಹಾಗೂ ತಜ್ಞ ವೈದ್ಯರಾದ ಡಾ.ಸಿ.ಕೆ.ಚಂದನ್ ಮಾತನಾಡಿ, ಡಾ.ಬಿ.ಸಿ.ರಾಯ್ ರವರ ಬದುಕು ಮತ್ತು ಅವರು ಅನುಸರಿಸಿದ ಮಾರ್ಗಗಳು ವೈದ್ಯರಿಗೆ ದಾರಿ ದೀಪವಾಗಬೇಕು. ಇಂತಹ ನಿಸ್ವಾರ್ಥ ಸಾಧಕರು ಹಾಕಿಕೊಟ್ಟ ಮಾರ್ಗಗಳನ್ನು ನಾವುಗಳೆಲ್ಲ ನಡೆಯುವುದೇ ಡಾ.ಬಿ.ಸಿ.ರಾಯ್ ರವರ ಅವರಂತಹ ಮಹಾಚೇತನ ನಾವು ಸಲ್ಲಿಸುವ ಅತ್ಯುತ್ತಮ ಗೌರವಿಸಬೇಕು. “ನೈತಿಕತೆ, ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವವೇ ಒಬ್ಬ ಉತ್ತಮ ವೈದ್ಯನ ಲಕ್ಷಣ. ಇಂದಿನ ದಿನ ಯುವ ವೈದ್ಯ ವಿದ್ಯಾರ್ಥಿಗಳಿಗೆ ಪ್ರೇರಣೆಯ ದಿನವಾಗಲಿ. ನಿಮ್ಮ ಕಲಿಕೆ ಹಾಗೂ ಸೇವೆಯಲ್ಲಿ ಸದಾ ಮಾನವೀಯತೆ ಇರಲಿ” ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅರಿವು ಇಂಟರ್‌ನ್ಯಾಷನಲ್ ಸ್ಕೂಲ್ ಮಕ್ಕಳು ಮತ್ತು ವಿ೨ ಸ್ಕೂಲ್ ಮಕ್ಕಳೊಂದಿಗೆ ವೈದ್ಯರ ದಿನಾಚರಣೆಯನ್ನು ಮಹತ್ವವನ್ನು ಅರಿವು ಮೂಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಡಾ.ಸಿ.ಕೆ.ಚಂದನ್, ಡಾ.ಕೆ.ಜಿ.ಲಿಖಿತಾ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅದಿತಿ ಆಸ್ಪತ್ರೆಯ ವ್ಯವಸ್ಥಾಪಕ ನಿದೇಶಕ ಹಾಗೂ ತಜ್ಞ ವೈದ್ಯ ಡಾ.ಸಿ.ಕೆ.ಚಂದನ್, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.