ಹೃದಯ ಆರೋಗ್ಯಕ್ಕೆ ಜಾಗೃತಿ ಜಾಥಾ


ಧಾರವಾಡ,ಅ.೨: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ. ನಾರಾಯಣ ಹಾರ್ಟ್ ಸೆಂಟರ್ ಹೃದಯ ಆರೋಗ್ಯ ಹಾಗೂ ಹೃದಯಾಘಾತ ತಡೆಗಟ್ಟುವಿಕೆಯ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬೈಕಥಾನ್ (ಬೈಕ್ ಜಾಥಾ) ನಡೆಯಿತು.


ಧಾರವಾಡ ಎಸಿಪಿ ಪ್ರಶಾಂತ ಸಿದ್ಧನಗೌಡರ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಮಪೆಕ್ಟರ್ ಮುರುಗೇಶ್ ಚನ್ನಣ್ಣವರ್ ಜಾಥಾಕ್ಕೆ ಚಾಲನೆ ನೀಡಿದರು.


ಜಾಥಾವು ಎಸ್.ಡಿ.ಎಂ. ಮಹಾವಿದ್ಯಾಲಯ ಆಸ್ಪತ್ರೆಯಿಂದ ಪ್ರಾರಂಭವಾಗಿ ಪಿಬಿ ರಸ್ತೆ, ಕೋರ್ಟ =ð ಸರ್ಕಲ್, ಜೂಬಿಲಿ ಸಕಲ್ ಮತ್ತು ಕಾಲೇಜು ರಸ್ತೆಯ ಮೂಲಕ ಸಾಗಿ ಕರ್ನಾಟಕ ಕಾಲೇಜ್ (ಕೆಸಿಡಿ) ನಲ್ಲಿ ಅಂತ್ಯಗೊAಡಿತು. ಸುಮಾರು ೨೦೦ಕ್ಕೂ ಹೆಚ್ಚು ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನಗಳ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಸ್ಪತ್ರೆಯ ಹಿರಿಯ ಹೃದಯ ರೋಗ ತಜ್ಞ ಡಾ. ರಘು ಪ್ರಸಾದ ಮಾತನಾಡಿ, ಆರೋಗ್ಯದ ಕಾಳಜಿ ವಹಿಸುವುದು ಸೂಕ್ತ ಅದರ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.


ಅರವಳಿಕೆ ತಜ್ಷ ಡಾ. ಗಣೇಶ ನಾಯಕ್ ಮಾತನಾಡಿ, ಪ್ರತಿಯೊಬ್ಬರ ಜೀವನಶೈಲಿ ಚೆನ್ನಾಗಿರಬೇಕು. ಪ್ರತಿನಿತ್ಯ ಯೋಗ ವ್ಯಾಯಾಮದಂತಹ ಚಟುವಟಿಕೆಯಲ್ಲಿ ನಿರತವಾಗಿರಬೇಕು ಅಲ್ಲದೇ ಅಹಾರ ಪದ್ಧತಿ ಚನ್ನಾಗಿರಬೇಕು ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ ಮಾತನಾಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೀರ್ತಿ ಪಿ.ಎಲ್. ಜಿ.ವಿ. ರಾಮನಗೌಡರ ವೇದಿಕೆಯಲ್ಲಿದ್ದರು. ದುಂಡೇಶ ತಡಕೋಡ ನಿರೂಪಿಸಿದರು. ಅಜೇಯ ಹುಲಮನಿ ವಂದಿಸಿದರು.