ಅರಿವು ಮೂಡಿಸುವ ಕಾರ್ಯಕ್ರಮ

ಧಾರವಾಡ,ಡಿ2: ಜೈನ್ ಕಾಲೇಜ್ ಆಫ್ ಇಂಜನಿಯರಿಂಗ್ & ಟೆಕ್ನಾಲಜಿ, ಹುಬ್ಬಳ್ಳಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಧಾರವಾಡ ಹಾಗೂ ವಿ ಕೇರ್ ಸೊಸೈಟಿ, ಬೆಂಗಳೂರು ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಭಾವಿ ಉದ್ಯಮಿದಾರರ ಉದ್ಯಮಶೀಲತಾ ಸಾಮಥ್ರ್ಯಗಳನ್ನು ಬಲಪಡಿಸುವ ಉದ್ದೇಶದಿಂದ(ಆರ್‍ಎಎಂಪಿ) ಯೋಜನೆಯಡಿಯಲ್ಲಿ ಇನ್‍ಕ್ಯೂಬಿಶನ್ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜರುಗಿಸಲಾಯಿತು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುತ್ರಪ್ಪ ಆರ್.ಹಚ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ಇವರು ವಹಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸ್ವಾವಲಂಭಿ ಉದ್ಯಮ/ಕೈಗಾರಿಕೆಗಳನ್ನು ಸ್ಥಾಪಿಸಲು ಇರುವ ಸವಲತ್ತುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.


ಇನ್ಕ್ಯೂಬೇಶನ್ ಕಾರ್ಯಕ್ರಮವನ್ನು ಡಾ. ಪ್ರಶಾಂತ್ ಬಣಕಾರ, ಪ್ರಾಂಶುಪಾಲರು, ಜೈನ್ ಕಾಲೇಜ್ ಆಫ್ ಇಂಜನಿಯರಿಂಗ್ & ಟೆಕ್ನಾಲಜಿ, ಹುಬ್ಬಳ್ಳಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಹಾಜರಿದ್ದ ವಿದ್ಯಾರ್ಥಿಗಳಿಗೆ ಕೋರಿದರು.


ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ, ಕು. ಸುಧಾಜೆ. ಪವಾರ, ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ, ಶಿವಾನಂದ ಕಮ್ಮಾರ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ, ನಂದಕಿಶೋರ ಕಣಜನವರ್, ಸಂಸ್ಥಾಪಕರು, ವಿ ಕೇರ್ ಸೊಸೈಟಿ, ಬೆಂಗಳೂರು, ಮಧುಕಿರಣ ಕೆ, ವಿಪಿ ಕಮ್ಯುನಿಕೇಷನ್ಸ್, ವಿ ಕೇರ್ ಸೊಸೈಟಿ, ಬೆಂಗಳೂರು, ಬಸವರಾಜ ಗಡಾದವರ್, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡಾ, ಹುಬ್ಬಳ್ಳಿ ಹಾಗೂ ವಿ ಕೇರ್ ಸೊಸೈಟಿಯ ಸಂಯೋಜಕಿ ಶ್ರುತಿ ಆರ್ ಭಾಗವಹಿಸಿದ್ದರು.


ಆರ್‍ಎಎಂಪಿ ಯೋಜನೆಯಡಿ ಉದ್ಯಮಶೀಲತಾ ಅಭಿವೃದ್ಧಿ, ಆರ್ಥಿಕ ಸಂಪರ್ಕಗಳು ಮತ್ತು ಬೆಂಬಲ ಕಾರ್ಯವಿಧಾನಗಳ ಕುರಿತು ತಜ್ಞರು ಒಳನೋಟಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸಂವಾದಾತ್ಮಕ ಅವಧಿಗಳು ವಿದ್ಯಾರ್ಥಿಗಳು ಮತ್ತು ಭಾಗವಹಿಸುವವರಿಗೆ ನವೀನ ವಿಚಾರಗಳನ್ನು ಕಾರ್ಯಸಾಧ್ಯವಾದ ವ್ಯಾಪಾರ ಉದ್ಯಮಗಳಾಗಿ ಪರಿವರ್ತಿಸುವ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸಿದರು ಹಾಗೂ ಶಿವಾನಂದ ಕಮ್ಮಾರ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಧಾರವಾಡ ಇವರು ಇಲಾಖೆಯಿಂದ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ಸಿಗುವ ಸೌಲಭ್ಯಗಳು ಹಾಗೂ ಇತರೆ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.


ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.