ಬಾದಾಮಿ,ಅ.೫: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ಹಾಗೂ ರೋವರ್ ಸ್ಕೌಟ್ಸ್ ಮತ್ತು ರೇಂಜರ್ ಗೈಡ್ಸ ಘಟಕಗಳ ಸಹಯೋಗದಲ್ಲಿ ವ್ಯಸನ ಮುಕ್ತ ದಿನಾಚರಣೆಯ ಪ್ರಯುಕ್ತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಚಾರ್ಯ ಪ್ರೊ.ಎಸ್.ಬಿ.ರಾಯನಗೌಡರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ “ವ್ಯಸನ ಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು” ಎಂದರು. ರೋವರ್ ಸ್ಕೌಟ್ ಘಟಕದ ಸಂಯೋಜಕ ಪ್ರೊ.ಚಂದ್ರಶೇಖರ ಹೆಗಡೆ ಮಾತನಾಡಿ “ಇಳಕಲ್ಲಿನ ಶ್ರೀ ಮಹಾಂತ ಶಿವಯೋಗಿಗಳ ಸ್ಮರಣಾರ್ಥ ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಶ್ರೀಗಳು ಮಹಾಂತ ಜೋಳಿಗೆಯ ಮೂಲಕ ಸಾಮಾಜಿಕ ಸುಧಾರಣೆಗೆ ಮುನ್ನುಡಿ ಬರೆದರು. ಎಂದು ಹೇಳಿದರು.
ಎನ್.ಎಸ್.ಎಸ್.ಘಟಕದ ಸಂಯೋಜನಾಧಿಕಾರಿ ಪ್ರೊ. ಗೋವರ್ಧನ ಪಿ.ಬಿ. ಇವರು ಮಾತನಾಡಿ “ಶಿಸ್ತು ಸಂಯಮದಿAದ ಜಾಗೃತಿ ಜಾಥಾ ವನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ” ಎಂದು ಹೇಳಿದರು.
ಬಿ.ಎ. ಬಿ.ಕಾಂ. ಬಿ.ಬಿ.ಎ ವಿಭಾಗದ ಎಲ್ಲ ವಿದ್ಯಾರ್ಥಿಗಳ ಜಾಗೃತಿ ನಡಿಗೆಯು ರಾಮದುರ್ಗ ಕ್ರಾಸ್, ಸರಾಫ್ ಬಜಾರ್ ಮೂಲಕ ಸಾಗಿ ಮಾರ್ಕೆಟ್ ರೋಡ್ ಮೂಲಕ ಬಾದಾಮಿಯ ಮುಖ್ಯರಸ್ತೆಯಲ್ಲಿ ಸಾಗಿ, ಅನಂದ ನಗರದ ವಿನಾಯಕ ದೇವಸ್ಥಾನಕ್ಕೆ ಕೊನೆಗೊಂಡಿತು.
ಐ.ಕ್ಯು.ಎ.ಸಿ ಘಟಕದ ಸಂಯೋಜಕÀ ಡಾ.ಎಂ.ಎನ್.ಸಿದ್ಧಲಿAಗಪ್ಪನವರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಕಂಚನಮಾಲಾ ಪಾಟೀಲ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸೀಮಾ ಜಿ.ಕೆ. ಉಪನ್ಯಾಸಕರಾದ ಡಾ. ವಿ.ಬಿ.ಸಣ್ಣಸಕ್ಕರಗೌಡರ, ಡಾ.ಪ್ರೇಮಾರ್ಜುನ ಎಚ್. ಕೆ, ಫಿರೋಜ್ ಬಾಗವಾನ, ವಿ.ವಾಯ್.ಬ್ಯಾಳಿ, ಶಿವಕುಮಾರ ಸ್ವಾಮಿ, ಉಪನ್ಯಾಸಕಿಯರಾದ ಕಾಂಚನಾ ಜಾಧವ, ಆರ್.ವಿ.ಸಂಕನಗೌಡರ, ಈಶ್ವರಪ್ಪ ಹಾಳಿ, ಗುರುರಾಜ ರಾಠೋಡ, ಜಗದೀಶ ಹಳ್ಳೂರ, ಕೆ.ಬಿ.ಹೂಗಾರ ಸೇರಿದಂತೆ ಸರ್ವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.























