
ಬೀದರ:ಡಿ.೩:ಇತ್ತಿಚಿಗೆ ಫ್ಯಾಮಿಲಿ ಪ್ಲಾö್ಯನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆಯಲ್ಲಿ “ಅಂತರಾಷ್ಟಿçÃಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನಾ ದಿನ” ದ ಅಂಗವಾಗಿ ಆರೋಗ್ಯ ಕಾರ್ಯಕರ್ತೆಯರಿಗೆ ಅರಿವು-ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಈPಂI ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿಣಿ ಸಭೆಯ ಸದಸ್ಯರು ಆದ ಡಾ. ನಾಗೇಶ್ ಪಾಟೀಲ್ ಇವರು ಮಹಿಳೆಯರ ವಿರುದ್ಧ ನಡೆಯುವ ಹಿಂಸೆಯನ್ನು ತೊಡೆದು ಹಾಕುವ ಸಲುವಾಗಿಯೇ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ನವೆಂಬರ್ ೨೫ ರಂದು “ಅಂತರಾಷ್ಟಿçÃಯ ಮಹಿಳಾ ದೌರ್ಜನ್ಯ ತಡೆ ದಿನ”À ಎಂದು ಘೋಷಿಸಿದೆ. ಇದರ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವದೇ ಈ ದಿನದ ಪ್ರಮುಖ ಉದ್ದೇಶವಾಗಿದೆ ಈ ಹಿಂದೆಯೇ ನಮ್ಮ ದೇಶದಲ್ಲಿ ೧೨ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಮಾಜದಲ್ಲಿ ಮಹಿಳೆಯರ ಸಮಾನತೆ ಎತ್ತಿಹಿಡಿದು, ಆಚರಣೆಯಲ್ಲಿ ತಂದಿದ್ದರು. ಸಾಕಷ್ಟು ಮಹಾನ್ ವ್ಯಕ್ತಿಗಳು ಕೂಡ ಮಹಿಳಾ ಸಮಾನತೆಗಾಗಿ ಶ್ರಮಿಸಿದ್ದಾರೆ. ಅದರ ಫಲವಾಗಿಯೇ ಇಂದು ಮಹಿಳೆಯರ ರಕ್ಷಣೆಗೋಸ್ಕರ “ಮಹಿಳಾ ಸಂರಕ್ಷಣಾ ಕಾಯಿದೆ” ಜಾರಿಗೆಯಲ್ಲಿ ಬಂದಿದೆ. ಆದ್ದರಿಂದ ಮಹಿಳೆಯರು ಸಮಾಜದಲ್ಲಿ ಕೇವಲ ಮಹಿಳೆಯರಾಗಲ್ಲದೇ ಒಂದು ಮಹಾನ್ ಶಕ್ತಿಯಾಗಿ ಬೆಳೆಯಬೇಕೆಂದು ಕರೆ ನೀಡಿದರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಈPಂI ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ರೇಖಾ ಚಂದಾ ಇವರು ಮಹಿಳೆಯರ ಮೇಲೆ ಯಾವ ಯಾವ ರೀತಿಯಲ್ಲಿ ಹಿಂಸೆಯಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು. ಹಾಗೂ ಜಗತ್ತಿನಲ್ಲಿ ಮಹಿಳೆಯರ ವಿರುದ್ಧ ಹಿಂಸಾಚಾರವು ವ್ಯಾಪಕವಾಗಿ, ನಿರಂತರವಾಗಿ ನಡೆಯುತ್ತಿದೆ. ಸಮಾಜದಲ್ಲಿ ಲಿಂಗ ಸಮಾನತೆ ತರಬೇಕು ಹಾಗೂ ಮಹಿಳೆಯರು ಪರಾವಲಂಬಿಯಾಗದೇ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕೆಂದು ಕರೆ ನೀಡಿದರು.
ಈPಂI ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಮೇಲಾಗುತ್ತಿರುವ ಶೋಷಣೆ ವಿರುದ್ದ ಜಾಗೃತಿ ಮೂಡಿಸುವ ಸಲುವಾಗಿ ನವೆಂಬರ್ ೨೫ ರಿಂದ ಡಿಸೆಂಬರ್ ೧೦ ರವರೆಗೆ ಅಂದರೆ ೧೬ ದಿನಗಳವರೆಗೆ ಈ ಜಾಗೃತಿ ಅಭಿಯಾನ ನಡೆಯುತ್ತದೆ. ಇದನ್ನು ಮಾನವ ಹಕ್ಕುಗಳ ದಿನ ಎಂದು ಕೂಡ ಬಣ್ಣಿಸಲಾಗಿದೆ ಎಂದು ತಿಳಿಸಿದರು.
ಈPಂI ಸಂಸ್ಥೆಯ ಅಂಕಿ ಸಂಖ್ಯಾಧಿಕಾರಿಗಳು ಹಾಗೂ ಆಪ್ತ ಸಮಾಲೋಚಕರಾದ ವಿನಾಯಕ ಕುಲಕರ್ಣಿ ಇವರು ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರ ಮೇಲಾಗುತ್ತಿರುವ ಹಿಂಸೆಯ ಬಗ್ಗೆ ವಿವರಿಸಿದರು ಹಾಗೂ ಇದನ್ನು ತಡೆಗಟ್ಟುವ ಸಲುವಾಗಿ ಭಾಗವಹಿಸಿದ ಆರೋಗ್ಯ ಕಾರ್ಯಕರ್ತೆಯರಿಗೆ ಪ್ರತಿಜ್ಞೆ ವಿಧಿಯನ್ನು ಮಾಡಿಸಿದರು.
ಈPಂI ಸಂಸ್ಥೆಯ ಡಾ. ಚಿನ್ನಮ್ಮಾ ಬಿರಾದಾರ ಇವರು ಕಾರ್ಯಕ್ರಮವನ್ನುದ್ದೇ ಶಿಸಿ ಮಾತನಾಡಿದರು
ಈPಂI ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ವಿಜಯ¯ಕ್ಷಿö್ಮ ಹುಡಗೆ ಇವರು ಕಾರ್ಯಕ್ರಮದ ನಿರೂಪಣೆ ಮಾಡಿ, ವಂದಿಸಿದರು.
ಈ ಕಾರ್ಯಕ್ರಮದಲ್ಲಿ ೪೦ ಜನ ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಂಸ್ಥೆಯ ಸಿಬ್ಬಂದಿವರ್ಗದವರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
























