ವೈಯಕ್ತಿಕ ಸ್ವಚ್ಛತೆ ಕುರಿತು ಜಾಗೃತಿ ಅಭಿಯಾನ

ಕಲಬುರಗಿ,ಆ.1-ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಂಎಎಂ ಫಾರ್ಮಸಿ ಕಾಲೇಜಿನ ವತಿಯಿಂದ ಕೆಪಿಎಸ್ ಸರಕಾರಿ ಶಾಲೆಯಲ್ಲಿ “ವೈಯಕ್ತಿಕ ಸ್ವಚ್ಛತೆ ಅಭ್ಯಾಸ” ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೈತೊಳೆಯುವ ತಂತ್ರಗಳು, ದಂತ ಸ್ವಚ್ಛತೆ ವಿಧಾನಗಳು, ಕೂದಲು ಹಾಗೂ ನಖಗಳ ತಪಾಲೆ, ಶೌಚಾಲಯಗಳ ಸದುಪಯೋಗ ಮತ್ತು ಶುದ್ಧತಾ ವರ್ತನೆಯ ಅಗತ್ಯಗಳ ಬಗ್ಗೆ ಫಾರ್ಮಸಿ ವಿದ್ಯಾರ್ಥಿಗಳು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತಿಳುವಳಿಕೆ ನೀಡಿದರು.
ಸ್ವಚ್ಛತೆ ಕಿಟ್‍ಗಳ ವಿತರಣೆ
ಪ್ರಾಯೋಗಿಕ ಅನುಷ್ಠಾನಕ್ಕೆ ಉತ್ತೇಜಿನ ನೀಡುವ ಸಲುವಾಗಿ ಸಾಬೂನು, ಹಲ್ಲುಜ್ಜುವ ಬ್ರಷ್, ಪೇಸ್ಟ್, ಟವೆಲ್‍ಗಳನ್ನು ಒಳಗೊಂಡ ಸ್ವಚ್ಛತಾ ಕಿಟ್‍ಗಳನ್ನು ವಿದ್ಯಾಥಿಗಳಿಗೆ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿ ಸ್ವಯಂ ಸೇವಕರು ಹಾಗೂ ಆರೋಗ್ಯ ಶಿಕ್ಷಣ ತಜ್ಞರು ಅಭಿಯಾನದಲ್ಲಿ ಭಾಗವಹಿಸಿ ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಲು ಕೈಜೋಡಿಸಿದರು.