371(ಜೆ) ಕಲಂ ವಿಶೇಷ ಸ್ಥಾನಮಾನದ ಬಗ್ಗೆ ಜಾಗೃತಿ ಅತಿ ಅವಶ್ಯಕ

ಕಲಬುರಗಿ,ಜೂ.9: ಸುದೀರ್ಘ ಹೋರಾಟ ಮತ್ತು ದಿಟ್ಟತನದ ರಾಜಕೀಯ ಇಚ್ಛಾಶಕ್ತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ 371ನೇ(ಜೆ) ಕಲಂ ಬಗ್ಗೆ ಮತ್ತು ಕಲ್ಯಾಣದ ಅಭಿವೃದ್ಧಿ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ಜನಮಾನಸದಲ್ಲಿ ಪ್ರಸ್ತುತ ದಶಮಾನೋತ್ಸವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಜಾಗೃತಿ ಅಭಿಯಾನದ ಮೂಲಕ ಅರಿವು ಮೂಡಿಸುವುದು ಅತಿ ಅವಶ್ಯವಾಗಿದೆ ಎಂದು ಖ್ವಾಜಾ ಬಂದೇನವಾಜ ದರ್ಗಾದ ಸಜ್ಜಾದಾ ನಶೀನ್ ಮುತುವಲ್ಲಿ, ಮತ್ತುಖ್ವಾಜಾ ಬಂದೇನವಾಜ ವಿಶ್ವವಿದ್ಯಾಲಯ ಕುಲಾಧಿಪತಿ ಹಾಗೂ ಕರ್ನಾಟಕ ರಾಜ್ಯ ವಕ್ಫ ಬೋರ್ಡ ಅಧ್ಯಕ್ಷ ಅಫೀಸ್ ಸೈಯದ್ ಮುಹಮ್ಮದ ಅಲಿ ಅಲ್ ಹುಸೇನಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ಮತ್ತು ಪ್ರಮುಖ ಪದಾಧಿಕಾರಿಗಳು ಖ್ವಾಜಾ ಬಂದಾನವಾಜ ದರ್ಗಾಕ್ಕೆ ಭೇಟಿ ನೀಡಿ ಸಂವಿಧಾನದ ವಿಶೇಷ ಸ್ಥಾನಮಾನ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚೆಯ ಸಂದರ್ಭದಲ್ಲಿ ಸಜ್ಜಾದಾ ನಶೀನ್ ಮತ್ತು ಮುತುವಲ್ಲಿರವರು ಈ ವಿಷಯ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪರಿಣಿತರು ಮತ್ತು ಪ್ರಮುಖರಾದ ಡಾ. ಬಸವರಾಜ ಕುಮನೂರ, ಡಾ. ಮಾಜಿದ್ ದಾಗಿ, ರೌಫ್ ಖಾದ್ರಿ, ಅಸ್ಲಂ ಚೌಂಗೆ, ಡಾ. ಮಂಜೂರಿ ಡೆಕ್ಕನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.