Home ಜಿಲ್ಲೆ ಕಲಬುರಗಿ ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಜಾಗೃತಿ ಅಗತ್ಯ

ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಜಾಗೃತಿ ಅಗತ್ಯ

ಕಲಬುರಗಿ : ಪ್ರತಿ ವರ್ಷ ಅಕ್ಟೋಬರ್ 4 ರಿಂದ ಅಕ್ಟೋಬರ್-10 ರವರೆಗೆ ಆಚರಿಸಲಾಗುತ್ತದೆ ಬಾಹ್ಯಾಕಾಶ ಸಪ್ತಾಹ ಆಚರಿಸಲಾಗುತ್ತದೆ. ಅಕ್ಟೋಬರ್ 4, 1957ರಲ್ಲಿ ಮೊಟ್ಟಮೊದಲ ಕೃತಕ ಉಪಗ್ರಹವಾದ ಸ್ಪುಟ್ನಿಕ್ -1 ಉಡಾವಣೆಯಾದ ದಿನದ ಸ್ಮರಣಾರ್ಥವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿನ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಬಾಹ್ಯಾಕಾಶ ಸಪ್ತಾಹ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಕ್ಟೋಬರ್ -10, 1967ರಂದು ಬಾಹ್ಯಾಕಾಶ ಒಪ್ಪಂದ ಜಾರಿಗೆ ಬಂದ ದಿನವಾಗಿದೆ. 1999ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಧಿಕೃತವಾಗಿ ಈ ವಾರವನ್ನು ಘೋಷಿಸಿದೆ. “ರಾಕೆಟ್ ಕ್ರಾಂತಿ” ಈ ವರ್ಷದ ಥೀಮ್ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್. ಬಿರಾದಾರ, ದತ್ತು ಹಡಪದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.