Home ಜಿಲ್ಲೆ ಕಾನೂನು ಸುರಕ್ಷತೆ ಬಗ್ಗೆ ಜಾಗೃತಿ ಅತ್ಯಗತ್ಯ

ಕಾನೂನು ಸುರಕ್ಷತೆ ಬಗ್ಗೆ ಜಾಗೃತಿ ಅತ್ಯಗತ್ಯ

ಔರಾದ್ :ಮಾ.6: ವಿದ್ಯಾರ್ಥಿಗಳಲ್ಲಿ ಕಾನೂನು, ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಆಯೋಜಿಸುವುದು ಅತ್ಯಗತ್ಯವಾಗಿದೆ ಎಂದು ಪಿಎಸ್‍ಐ ದಿನೇಶ ಹೇಳಿದರು.

ಗುರುವಾರ ತಾಲ್ಲೂಕಿನ ಸಂತಪೂರ್ ಅನುಭವ ಮಂಟಪ ಗುರುಕುಲ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಕಡಿಮೆ ವಯೋಮಾನದ ಮಕ್ಕಳು ಮೊಬೈಲ್ ಫೆÇೀನ್ ಹಾಗೂ ಇನ್ನಿತರ ಕೆಟ್ಟ ದುರ್ವಸನಗಳಿಗೆ ಬಲಿಯಾಗಿ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಮನೆಯಲ್ಲಿ ಪೆÇೀಷಕರು ಉತ್ತಮ ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದೆ ಎಂದರು .

ಇದೆ ವೇಳೆ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ, ಪೆÇೀಕ್ಸೊ (PಔಅSಔ) ಕಾಯ್ದೆ, ಮಕ್ಕಳ ಸಹಾಯವಾಣಿ 1098, ಬಾಲ ಕಾರ್ಮಿಕ ಪದ್ಧತಿ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಅಕ್ಕಪಡೆಯ ಸಿಬ್ಬಂದಿ ಮೀನಾಕ್ಷಿ ನಾಗುರ್ಕರ, ಮುಖ್ಯ ಗುರು ಶಿವಕುಮಾರ ಹಿರೇಮಠ, ಗುರುಪ್ರೀತ ಕೌರ್, ಅಶ್ವಿನಿ, ಶೈಲಜಾ, ಮಾರುತಿ ಗಾದಗೆ, ಸಾಯಪ್ಪ ಕರೆಂಜೆ, ವಿಜಯಕುಮಾರ ಪಾಟೀಲ್, ಇದ್ದರು.