ಹ್ಯಾಂಡ್ ವಾಶ್ ಕುರಿತು ಅರಿವು

ಬೀದರ್: ಡಿ.5:ಇತ್ತಿಚೀಗೆ ರಾಯಚೂರಿನ ಗೋನವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹ್ಯಾಂಡ್ ವಾಶ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಸ್ಮೈಲ್ ಪೌಂಡೇಶನ್ ವತಿಯಿಂದ ಏರ್ಪಡಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ವೈದ್ಯರು ಶಾಲೆಯ ಮಕ್ಕಳಿಗೆ ಕೈ ತೊಳೆಯುವ ಸರಿಯಾದ ವಿಧಾನಗಳನ್ನು ಮತ್ತು ಹ್ಯಾಂಡ್ ವಾಶ್” ಎಂದರೆ ಕನ್ನಡದಲ್ಲಿ “ಕೈ ತೊಳೆಯುವುದು ಎಂದು ಹೇಳಲಾಗುತ್ತದೆ.
ಕೈಗಳನ್ನು ಸೋಪಿನಿಂದ ಮತ್ತು ನೀರಿನಿಂದ ಸರಿಯಾಗಿ ತೊಳೆಯುವುದರಿಂದ ಅನೇಕ ರೋಗಗಳ ಹರಡುವಿಕೆಯನ್ನು ತಡೆಯಬಹುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶಾಲೆಯ ಮಕ್ಕಳಿಗೆ ತಿಳಿಸಿದರು
ನಂತರ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಡೆಟ್ಟಲ್ ಸೋಪನ್ನು ಕೈಗಳನ್ನು ತೊಳೆದಿಕೊಳ್ಳಲು ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಸ್ಮೈಲ್ ಫೌಂಡೇಶನ್ ಸಿಬ್ಬಂದಿ ಮತ್ತು ಶಾಲೆಯ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು