ಜೂ. 3ರಂದು ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದರಿಗೆ ಪ್ರಶಸ್ತಿ ಪ್ರದಾನ : ಸಂತೋಷ ಕುಡ್ದಳ್ಳಿ

ಕಾಳಗಿ :ಮೇ.29: ಪ್ರಸಕ್ತ ಸಾಲಿನ ಹತ್ತನೇ ಮತ್ತು ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಾಳಗಿ ತಾಲೂಕಿನ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ಅವರಲ್ಲಿ ಮಾತೃ ಭಾಷಾಭಿಮಾನ, ನಾಡು-ನುಡಿಯ ಬಗ್ಗೆ ಗೌರವ ಹೆಚ್ಚಿಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದ್ದು, “ಗರಿಷ್ಠಾಂಕ” ಮಲ್ಲ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭ ಜೂನ್ 3 ರ ಬೆಳಗ್ಗೆ 10.15 ಕ್ಕೆ ಪಟ್ಟಣದ ಶ್ರೀ ಅಂಬಾಭವಾನಿ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಹೇಳಿದರು.

ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಭಾಷೆಯ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಮಾತೃಭಾಷೆಯ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಭಾಷೆಯ ಅಭಿಮಾನದ ಕಿಚ್ಚು ಹಚ್ಚುವ ಮತ್ತು ಸಾಧನೆಯ ಹೊಸ ಕನಸು ಬಿತ್ತುವ ಪ್ರಾಮಾಣಿಕ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದು ಅವರು ವಿವರಿಸಿದರು.

2025 ಸಾಲಿನ ಎಸ್ ಎಸ್ ಎಲ್ ಸಿ (ಕನ್ನಡ ವಿಷಯ ) 125/115 ಮೇಲ್ಪಟ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ 100/90 (ಕನ್ನಡ ವಿಷಯ )ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಗರಿಷ್ಠಾಂಕ” ಮಲ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು
ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಷ.ಬ್ರ.ಶ್ರೀ ಅಭಿನವ ರಾಚೋಟೇಶ್ವರ ಸಂಸ್ಕøತ ಸಂಸ್ಥಾನ ಕಟ್ಟಿಮಠ ಚಂದನಕೇರಾ, ಉದ್ಘಾಟಕರಾಗಿ ಶಾಸಕ ಡಾ. ಅವಿನಾಶ ಜಾಧವ, ಅಧ್ಯಕ್ಷತೆಯನ್ನು ಕಲಬುರಗಿ ಈಡಿಗ ಸಮಾಜ ಜಿಲ್ಲಾ ಅಧ್ಯಕ್ಷ ರಾಜೇಶ ಗುತ್ತೇದಾರ, ವಿಶೇಷ ಆಹ್ವಾನ್ವಿತರಾಗಿ ತಹಸೀಲ್ದಾರ್ ಗಮಾವತಿ ರಾಠೋಡ, ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಲಕ್ಷ್ಮಯ್ಯ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.