ದಿನಕರರಾವ ಕುಲಕರ್ಣಿಗೆ ಪ್ರಶಸ್ತಿ ಪ್ರದಾನ

ಕಲಬುರಗಿ: ನ.೪:ನಗರದ ಹಿರಿಯ ಪಾರಂಪರಿಕ ವೈದ್ಯರು ಹಾಗೂ ಹಿಂದೂ ಮಹಾಸಭಾ ರಾಜ್ಯ ಹಿರಿಯ ಉಪಾಧ್ಯಕ್ಷರಾದ ದಿನಕರರಾವ ನಾರಾಯಣರಾವ ಕುಲಕರ್ಣಿ ಅಷ್ಟಗಿ ಅವರಿಗೆ ಹುಬ್ಬಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ಹೈಸ್ಕೂಲಿನ ಡಾ. ಮೂಜಗಂ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ `ವಿಶ್ವಕನ್ನಡ ಬಳಗ’ದ ವತಿಯಿಂದ ಗಣ್ಯರು ದಿನಕರರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ವಿಶ್ವಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಎಸ್. ಚೌಶೆಟ್ಟಿ, ಗೋವಿಂದ ಜೋಶಿ, ರಮೇಶ ಮಹಾದೇವಪ್ಪನವರ, ಮಲ್ಲಿಕಾರ್ಜುನ ಸಾವಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ದಿನಕರರಾವ ಕುಲಕರ್ಣಿ ಅವರು ಪಾರಂಪರಿಕ ವೈದ್ಯಕೀಯ, ಸಮಾಜ ಸೇವಾ ಕ್ಷೇತ್ರಗಳಲ್ಲಿನ ಸೇವೆ, ಕೊಡುಗೆ, ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಿದ್ದಾಗಿ ಸದಾಶಿವ ಎಸ್. ಚೌಶೆಟ್ಟಿ ಹೇಳಿದರು.