Home ಜಿಲ್ಲೆ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ,ಫೆ28: ನಗರದ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಸಂತೋಷ ಆರ್ ಶೆಟ್ಟಿ ಅವರಿಗೆ ಮಂತ್ರಾಲಯದ ಪ್ರತಿಷ್ಠಿತ `ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಲಾಯಿತು.

ಮಂತ್ರಾಲಯ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಡಾ. ಶ್ರೀ ಮತ್ಸುಬುಧೇಂದ್ರ ತೀರ್ಥ ಶ್ರೀಗಳು ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪ್ರಶಸ್ತಿ ಸ್ವೀಕರಿಸಿದ ಸಂತೋಷ ಆರ್ ಶೆಟ್ಟಿ ಅವರು ಈ ಗೌರವವನ್ನು ತಮ್ಮ ಸಮಾಜಸೇವಾ ಪಯಣದ ಮಹತ್ವದ ಘಟ್ಟವೆಂದು ಹೇಳಿದರು.

ಪ್ರಶಸ್ತಿ ಪ್ರದಾನ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಸಮಾಜಮುಖಿ ಹಾಗೂ ಜನಪರ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಂಡು ಜನಸೇವೆ ಮುಂದುವರಿಸಲು ಕರೆ ನೀಡಿದರು.