ಜೇವರಗಿ,ನ.25: ಒಬ್ಬ ವ್ಯಕ್ತಿ ಸತತವಾಗಿ ಅವರದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಅವರ ಮೌಲ್ಯವನ್ನು ಗುರುತಿಸಿ ಪ್ರಶಸ್ತಿ ಕೊಡುವುದು ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ದೊಡ್ಡಪ್ಪ ಪೂಜಾರಿ ಹುಂಡೆಕಲ್ ಹೇಳಿದರು ಬೆಂಗಳೂರಿನ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಸಂಸ್ಥೆ ಆಯೋಜಿಸಿದ 70 ನೇ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮಹಿಳಾ ರಾಜ್ಯ ಕಾರ್ಯದರ್ಶಿ ಸುಮಾ ಎಸ್ ಕವಲ್ದಾರ್ ಉಪಸ್ಥಿತರಿದ್ದರು. ಸಾಮಾಜಿಕ ರಂಗದಲ್ಲಿ ತಮ್ಮದೇ ಆದ ಸೇವೆಯನ್ನು ಮಾಡಿರುವ ಸುರೇಶ್ ಪರಸಾಪುರ್ ಸನ್ಮಾನಿಸಿ ಸಮಾಜ ಸೇವೆ ಪ್ರಶಸ್ತಿ ನೀಡಲಾಯಿತು.























