ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ

ಬೀದರ್:ಸೆ.11: ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಸಂಘಟನೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ಕಾಶಿನಾಥ ಪಾಟೀಲ ಹೇಳಿದರು.
ನಗರದ ಗೋಲೆಖಾನಾದ ಅಲ್ ಅಮೀನ್ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ಲಾಸ್ಟಿಕ್ ರಹಿತ ದಿನಾಚರಣೆ ಹಾಗೂ ಪರಿಸರ ಜಾಗೃತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಪ್ಲಾಸ್ಟಿಕ್ ಬಳಸದಂತೆ ಸಂಕಲ್ಪ ತೊಡಬೇಕು. ಪ್ಲಾಸ್ಟಿಕ್ ಬದಲು ಬಟ್ಟೆ ಕೈಚೀಲ, ಪರಿಸರ ಸ್ನೇಹಿಯಾದ ವಸ್ತುಗಳನ್ನು ಬಳಸಬೇಕು ಎಂದು ತಿಳಿಸಿದರು.
ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಪರಿಸರ ಸಂಘಟನೆಯ ಕಲಬುರಗಿ ಅಧ್ಯಕ್ಷ ಅಶೋಕ ದೇವಣಗಿ ಹೇಳಿದರು.
ಆರೋಗ್ಯಕರ ಜೀವನಕ್ಕೆ ಉತ್ತಮ ಪರಿಸರ ಅಗತ್ಯ. ಎಲ್ಲರೂ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ (ಆಡಳಿತ) ಸುರೇಖಾ ತಿಳಿಸಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹೊಂದಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಕಾರಕ್ಕೆ ಪ್ರಯತ್ನಿಸಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಮುಹಮ್ಮದ್ ವಕೀಲ ಪಟೇಲ್ ಹೇಳಿದರು.
ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮುಹಮ್ಮದ್ ಅಹೆಮದ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸಂಗಮೇಶ ಎಸ್. ಹಿರೇಮಠ, ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಸಲಾಂ ಮುಬಾಶಿರ್ ಸಿಂದೆ, ಕಾಲೇಜು ಕಚೇರಿ ಮೇಲ್ವಿಚಾರಕ ಮುಹಮ್ಮದ್ ಸಿರಾಜೊದ್ದೀನ್ ಖಾನ್, ಪ್ರಾಥಮಿಕ ಶಾಲೆಯ ಉಪ ಪ್ರಾಚಾರ್ಯ ಎಂ.ಡಿ. ಮುಕ್ರಂ, ಪದವಿ ಕಾಲೇಜು ಉಪನ್ಯಾಸಕಿ ಮೋನಿಕಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ.ಡಿ. ಖಾಜಾ ಸ್ವಾಗತಿಸಿದರು. ಅಫೆÇ್ರೀಜ್ ಫಾತಿಮಾ ಮತ್ತು ಫಾತಿಮಾ ಜೋಹರಾ ನಿರೂಪಿಸಿದರು.
ಕರ್ನಾಟಕ ರಾಜ್ಯ ಪರಿಸರ ಸಂಘಟನೆ, ಬಾಪೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಅಲ್ ಅಮೀನ್ ಪದವಿ ಕಾಲೇಜು ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.