
ಕಲಬುರಗಿ :ನ.7:ವಯಸ್ಸು, ಲಿಂಗ, ಅನುವಂಶೀಯತೆ, ಪರಿಸರದ ಅಂಶಗಳು, ರಾಸಾಯನಿಕ ವಸ್ತುಗಳ ಸೇವನೆ, ತಂಬಾಕು, ಆಲ್ಕೋಹಾಲ್, ವಿಷಪೂರಿತಆಹಾರದ ಸೇವನೆ, ಎಚ್.ಸಿ.ಬಿ, ಎಚ್.ಬಿ.ವಿ, ಇ.ಬಿ.ವಿ ಬ್ಯಾಕ್ಟಿರೀಯಾ, ಕೆಲವು ಔಷಧಗಳ ನಿರಂತರ ಸೇವನೆಯಂತಹ ಮುಂತಾದ ಕಾರಣಗಳಿಂದ ಕ್ಯಾನ್ಸರ್‍ರೋಗ ಬರುತ್ತದೆ. ತಂಬಾಕು, ಮದ್ಯಪಾನ, ರಾಸಾಯನಿಕಯುಕ್ತಆಹಾರ ಸೇವನೆ ಮಾಡಿರುವುದು, ಸಮತೋಲಿತಆಹಾರ ಸೇವಿಸುವುದು, ತೂಕ ನಿರ್ವಹಣೆ ಮಾಡುವುದು ಸೇರಿದಂತೆ ಮುಂತಾದಆರೋಗ್ಯಕರಜೀವನ ಶೈಲಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕ್ಯಾನ್ಸರ್‍ರೋಗ ಬರದಂತೆತಡೆಯಬಹುದಾಗಿದೆಎಂದುವೈದ್ಯಾಧಿಕಾರಿಡಾ.ಅನುಪಮಾ ಎಸ್.ಹೇಳಿದರು.
ನಗರದಶೇಖರೋಜಾದಲ್ಲಿರುವ ಶಹಾಬಜಾರ ಯುಪಿಎಚ್‍ಸಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆಗುರುವಾರಜರುಗಿದ ‘ವಿಶ್ವಕ್ಯಾನ್ಸರ್‍ಜಾಗೃತಿದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಆಧುನಿಕಒತ್ತಡದ ಬದುಕಿನಲ್ಲಿಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ದೇಹದಲ್ಲಿ ಜೀವಕೋಶಗಳ ಅಸಾಮಾನ್ಯ ಬೆಳವಣಿಗೆಯಾಗುತ್ತವೆ. ಕ್ಯಾನ್ಸರ್‍ನಲ್ಲಿ 200ಪ್ರಕಾರಗಳಿವೆ. ಚರ್ಮದಲ್ಲಿಗಂಟು ಹಾಗೂ ಹಳದಿ ಬಣ್ಣಕ್ಕೆತಿರುಗುವುದು, ತೂಕದಲ್ಲಿ ಹೆಚ್ಚಳ ಅಥವಾ ನಷ್ಟ, ಉಸಿರಾಟದ ತೊಂದರೆ, ನಿರಂತರವಾದ ಕೀಲುನೋವು, ರಕ್ತಸ್ರಾವವಾಗುವುದು ಲಕ್ಷಣಗಳಾಗಿವೆ. ಆರಂಭದಲ್ಲಿಇದನ್ನು ಗುರ್ತಿಸಿ, ಚಿಕಿತ್ಸೆ ಪಡೆದರೆಗುಣಮುಖರಾಗಲು ಸಾಧ್ಯವಿದೆ. ಕ್ಯಾನ್ಸರ್‍ರೋಗಿಗಳ ಬಗ್ಗೆ ಕೀಳರಿಮೆ ಬೇಡ. ಭಯ ಬೇಡ, ಮುಂಜಾಗ್ರತೆ ವಹಿಸಿಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಆರೋಗ್ಯಕೇಂದ್ರದ ಸಿಬ್ಬಂದಿಗಳಾದ ಗುರುರಾಜಕೈನೂರ್, ಜಗನಾಥಗುತ್ತೇದಾರ, ಗಂಗಾಜ್ಯೋತಿಗಂಜಿ, ರೇಷ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮಅತನೂರ್, ಮಂಗಲಾಚಂದಾಪುರೆ, ಲಕ್ಷ್ಮೀ, ಶ್ರೀದೇವಿ,ಅರ್ಚನಾ, ಅನಿತಾ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.























