ಜೇವರಗಿ,ಜು.5: ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯ ಗಡ್ಡಿಹಳ್ಳದ ಹತ್ತಿರ ಎರಡು ಆಟೋ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ ಯುವಕನೊಬ್ಬ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ತಾಲ್ಲೂಕಿನ ಬುಟ್ನಾಳ ಗ್ರಾಮದ ಭೀಮಾಶಂಕರ ನಾಗಣ್ಣ ಜನಿವಾರ (31) ಮೃತರು. ಆತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಕಲಬುರಗಿ ನಿವಾಸಿಗಳಾದ ಸಂಗಮ್ಮ ಹಾಗೂ ಸಂತೋಷ್‍ಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ತಕ್ಷಣ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆದಾಖಲಿಸಲಾಗಿದೆ.
ಪಟ್ಟಣದಲ್ಲಿ ಹಮ್ಮಿಕೊಂಡ ಜೆಡಿಎಸ್ ಸಮಾವೇಶದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ಇದರಿಂದ ಬೈಪಾಸ್ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಕರ್ತವ್ಯ ಮುಗಿಸಿಕೊಂಡು ಆಟೋದಲ್ಲಿ ಸಂಗಮ್ಮ ಹಾಗೂ ಸಂತೋಷ ಬಸ್ ಡಿಪೆÇ ಹತ್ತಿರ ತೆರಳುತ್ತಿದ್ದರು. ಮತ್ತೊಂದು ಆಟೋದಲ್ಲಿ ಭೀಮಾಶಂಕರ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.ಜೇವರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.