ಬಯಲು ಶೌಚಕ್ಕೆ ಬೇಡಿಕೆ ಇಟ್ಟವರಿಗೆ ಅಧಿಕಾರಿಗಳಿಂದ ಬುದ್ದಿವಾದ

ತಾಳಿಕೋಟೆ:ನ.೧೦: ಬಯಲು ಶೌಚಮುಕ್ತ ಗ್ರಾಮ ಮಾಡಲು ಸರ್ಕಾರಗಳು ಸಾಕಷ್ಟು ಅನುದಾನ ಒದಗಿಸುವದರೊಂದಿಗೆ ಪ್ರತಿ ಮನೆ ಮನೆಗೆ ಶೌಚಾಲಯ ಕಟ್ಟಿಸಿಕೊಳ್ಳಲು ಯೋಜನೆ ರೂಪಿಸಿದ್ದರೂ ಕೂಡಾ ಕೆಲವರು ಬಯಲು ಶೌಚಾಲಯ ಬೇಕು ಮಂಜೂರಾದ ನೂತನ ಆಸ್ಪತ್ರೆ ನಮಗೆ ಬೇಡಾ ಎಂಬ ಹಟಕ್ಕೆ ಬಿದ್ದವರಿಗೆ ಪೊಲೀಸ್‌ರ ಮಧ್ಯಸ್ಥಿಕೆಯಲ್ಲಿ ಅಧಿಕಾರಿ ವರ್ಗ ಬುದ್ದಿವಾದ ಹೇಳಿದ ಘಟನೆ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ರವಿವಾರರಂದು ನಡೆದಿದೆ.
ತಾಳಿಕೋಟೆ ತಾಲೂಕು ಅತೀ ಹಿಂದೂಳಿದ ತಾಲೂಕಾ ಪಟ್ಟಿಯಲ್ಲಿ ಸೇರಿದ್ದರಿಂದ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ತಮ್ಮ ಕ್ಷೇತ್ರದ ಗ್ರಾಮಗಳಿಗೆ ಅವಶ್ಯವಿರುವ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಚಿಕೀತ್ಸಾಲಯವನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಮಂಜೂರಾತಿ ಮಾಡಿಸಿದ್ದು ಸದರಿ ಆಸ್ಪತ್ರೆ ಕಟ್ಟಲು ಅನುಮೋದನೆಗೊಂಡ ಸರ್ಕಾರಿ ಖುಲ್ಲಾ ಜಾಗೆಯನ್ನು ಇತ್ತೀಚಗೆ ಸ್ವಚ್ಚತೆ ಕೈಗೊಂಡಿದ್ದರು. ಸದರಿ ಜಾಗೆಯನ್ನು ಕೆಲವರು ಕಬಳಿಕೆ ಮಾಡುವ ದೃಷ್ಠಿಯಿಂದ ಗ್ರಾಂಪAದ ೯ನಂಬರ ಬುಕ್‌ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊAಡಿದ್ದರೆನ್ನಲಾಗಿದ್ದು ಸದರಿ ಜಾಗೆ ಕಬಳಿಕೆ ಯಾಗುವದನ್ನು ತಪ್ಪಿಸಲು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಬೆನ್ನೇಲೆ ಕೆಲವು ಬರಳೆಣಿಕೆಯಷ್ಟು ಮಹಿಳೆಯರನ್ನು ಮುದಿಟ್ಟುಕೊಂಡು ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿ ಪಡಿಸಲು ಮುಂದಾಗಿದ್ದರ ಪರಿಣಾಮ ತಾಳಿಕೋಟೆ ಪೊಲೀಸ್ ಠಾಣಾ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರ ಸಮ್ಮುಖದಲ್ಲಿ ಗ್ರಾಂಪA ಅಭಿವೃದ್ದಿ ಅಧಿಕಾರಿ ಬಡಿಗೇರ ಮತ್ತು ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ ಅವರು ಬಯಲು ಶೌಚಕ್ಕೆ ಬೇಡಿಕೆ ಇಟ್ಟವರಿಗೆ ಶಾಂತಿಯುತವಾಗಿ ತಿಳುವಳಿಕೆ ನೀಡುವದರ ಜೊತೆಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಣಗೆ ಮುಂದಾದರು.
ಈ ಸಮಯದಲ್ಲಿ ಗ್ರಾಮದ ಮುಖಂಡ ಮಡುಸಾಹುಕಾರ ಬಿರಾದಾರ ಅವರು ಮಾತನಾಡಿ ಗ್ರಾಮವು ಅಭಿವೃದ್ದಿ ಹೊಂದಬೇಕಾದರೆ ಎಲ್ಲ ಜನರ ಸಹಕಾರವೆಂಬುದು ಬಹಳೇ ಮುಖ್ಯವಾಗಿದೆ ಗ್ರಾಮದಲ್ಲಿ ಸಣ್ಣ ಪುಟ್ಟ ಕಾಯಲೆಗಳು ಬಂದರೂ ಕೂಡಾ ತಾಳಿಕೋಟೆ ಪಟ್ಟಣಕ್ಕೆ ಹೋಗಬೇಕಾದಂತಹ ಸಂದರ್ಬ ಇತ್ತು ಆದರೆ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಅವರಿಗೆ ಗಡಿಸೋಮನಾಳ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಲ್ಲಿಯೇ ಅತ್ಯವಶ್ಯವಾಗಿದ್ದ ಪ್ರಾಥಮಿಕ ಚಿಕೀತ್ಸಾ ಕೇಂದ್ರವನ್ನು ಪ್ರಾರಂಬಿಸುವದಕ್ಕೆ ಒತ್ತಾಯಿಸಿದ ಹಿನ್ನೇಲೆ ಗಡಿ ಸೋಮನಾಳ ಗ್ರಾಮಕ್ಕೆ ಆಸ್ಪತ್ರೆಯನ್ನು ಮಂಜೂರಾತಿ ಗೊಳಿಸಿ ಸುಮಾರು ೬೫ ಲಕ್ಷ ರೂ. ಹಣವನ್ನು ಕೂಡಾ ಬಿಡುಗಡೆಗೊಳಿಸಿ ಆಸ್ಪತ್ರೆ ಕಟ್ಟಲು ಮುಂದಾಗಿದ್ದಾರೆ ಆದರೆ ಕೆಲವರು ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡಲು ಬರುತ್ತಿರುವದು ಸರಿಯಾದುದ್ದಲ್ಲಾ ಆಸ್ಪತ್ರೆ ಎಂಬುದು ಬಡಬಗ್ಗರಿಗೆ ಉಪಯುಕ್ತವಾಗಲಿದೆ ಸದರಿ ಸ್ಥಳದಲ್ಲಿ ಕೆಲವರು ಬಯಲು ಶೌಚ ಬಯಸುತ್ತಿರುವದು ಖೇದಕರ ಸಂಗತಿಯಾಗಿದೆ ಬೇರೆ ಕಡೆ ಜಾಗದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಹೈಟೆಕ್ ಸಾಮೂಹಿಕ ಸೌಚಾಲಯ ನಿರ್ಮಾಣ ಮಾಡೋಣ ಈ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಿಸಲು ಯಾರೂ ಬಡಬೇಡಿ ಎಂದು ಮನವಿ ಮಾಡಿದರು.
ಬಯಲು ಶೌಚ ಬೇಡಿದವರಿಗೆ ಬುದ್ದಿವಾದ
ಈ ಸಮಯದಲ್ಲಿ ಎರಡ್ಮೂರು ಜನ ಮಹಿಳೆಯರು ಆಸ್ಪತ್ರೆ ಎಲ್ಲೆಯಾದರೂ ಕಟ್ಟಿ ನಮಗೆ ಬಯಲು ಶೌಚಕ್ಕೆ ಇದೇ ಜಾಗೆ ಕೊಡಿ ಎಂದು ಕೂಗಾಡಿದ ಎರಡ್ಮೂರು ಜನ ಮಹಿಳೆಯರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರೂ ಗ್ರಾಂಪA ಅಭಿವೃದ್ದಿ ಅಧಿಕಾರಿಗಳು ಬಯಲು ಶೌಚಕ್ಕೆ ಎಲ್ಲಯೂ ಅವಕಾಶವಿಲ್ಲಾ ನಿಶೇದಿತವಾದ ಬಯಲು ಶೌಚಾಲಯವನ್ನು ಬಿಟ್ಟು ಬಿಡಿ ಜಾಗದ ಕೊರತೆಯಿಂದ ಕೆಲವು ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಆಗಿರದಿದ್ದರೆ ಅಂತವರ ಅನುಕೂಲಕ್ಕೆ ಸರ್ಕಾರದ ಅನುಮತಿಯೊಂದಿಗೆ ಹೈಟೆಕ್ ಶೌಚಾಲಯ ಕಟ್ಟಲು ಅವಕಾಶವಿದೆ ಅದನ್ನು ಮುಂದಿನ ದಿನಗಳಲ್ಲಿ ಮಾಡೋಣವೆಂದು ಮನವಿ ಮಾಡಿದರೂ ಕೂಡಾ ಕೆಲವರು ತಮ್ಮದೆ ತಗಾದೆ ತೆಗೆಯಲು ಮುಂದಾದರು ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಸರ್ಕಾರಕ್ಕೆ ವಿರೂದ್ದವಾಗಿ ಕಾನೂನಿಗೆ ವಿರೂದ್ದವಾಗಿ ಯಾರೂ ನಡೆದುಕೊಳ್ಳುವಂತೆ ಇಲ್ಲಾ ಸರ್ಕಾರ ನಿಗಧಿ ಪಡಿಸಿದ ಜಾಗೆಯಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಾಣವಾಗಲಿದೆ ಇದಕ್ಕೆ ಅಡ್ಡಿಪಡಿಸುವದಾಗಲಿ ಯಾರಿಂದಲೂ ಕಂಡು ಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಏಚ್ಚರಿಸಿದ ಘಟನೆಯೂ ನಡೆಯಿತು.
ಅಧಿಕಾರಿಗಳ ಬಂಬಲಕ್ಕೆ ನಿಂತ ಜನ

ಎರಡ್ಮೂರು ಜನ ಮಹಿಳೆಯರ ವಿರೂದದ ಮಧ್ಯವೂ ಕೂಡಾ ಅಧಿಕಾರಿವರ್ಗದವರು ಆಸ್ಪತ್ರೆ ಬೇಕೋ ಬಯಲು ಶೌಚಾಲಯ ಬೇಕೋ ಎಂಬ ಅಭಿಪ್ರಾಯ ಸಂಗ್ರಹಿಸಲು ಜನರಿಗೆ ಕೈ ಮೇಲಕ್ಕೆ ಎತ್ತಲು ಕೇಳಿದಾಗ ಬೇರಳೆಣಿಕೆ ಜನರ ಹೊರತು ಪಡಿಸಿ ಮಹಿಳೆಯರು, ಗ್ರಾಮದ ಜನರು ಕೈ ಮೇಲಕ್ಕೆ ಎತ್ತಿ ಬೇಕೇ ಬೇಕು ಆಸ್ಪತ್ರೆ ಬೇಕು ಎಂದು ಕೂಗಲಾರಂಬಿಸಿದರು. ಜನರ ಅಭಿಪ್ರಾಯದ ಮೇರೆಗೆ ಸರ್ಕಾರದ ಸೂಚನೆಯಂತೆ ಸದರಿ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ ಕೆಲವು ಜನ ಮಹಿಳೆಯರ ಅಭಿಪ್ರಾಯಕ್ಕೂ ಮನ್ನಣೆ ನೀಡಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವದೆಂದು ಗ್ರಾಮಸ್ಥರಿಗೆ ಅಧಿಕಾರಿಗಳು ತಿಳಿಸಿ ತೆರಳಿದರು.

ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಜನ
ಅತ್ಯಂತ ಹಿಂದೂಳಿದ ಪ್ರದೇಶದ ವ್ಯಾಪ್ತಿಗೆ ಸೇರಿದ ಗಡಿ ಸೋಮನಾಳ ಗ್ರಾಮದಲ್ಲಿ ಬಡ ಜನರ ಅನುಕೂಲಕ್ಕಾಗಿ ಪ್ರಾಥಮಿಕ ಚಿಕೀತ್ಸಾಲಯವನ್ನು ಮಂಜೂರಾತಿ ಸರ್ಕಾರದಿಂದ ಗೊಳಿಸಿದ ಶಾಸಕ ರಾಜುಗೌಡರಿಗೆ ಕೃತಜ್ಞರಾಗಿದ್ದೇವೆ ಅದರಂತೆ ಗ್ರಾಮಕ್ಕೆ ಅವಶ್ಯವಿರುವ ಸಿಸಿ ರಸ್ತೆ, ಕುಡಿಯುವ ನೀರಿನ ಸೌಕರ್ಯ ಒದಗಿಸುವಂತಹ ಕಾರ್ಯ ಮಾಡಿದ್ದಾರೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಗಡಿಸೋಮನಾಳ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸಿ ಮಾದರಿಯ ಗ್ರಾಮ ಮಾಡಲೆಂದು ಹರಿಸುತ್ತೇವೆಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಗ್ರಾಮದ ಮುಖಂಡರಾದ ನಿಂಗನಗೌಡ ಬಿರಾದಾರ, ಭೀಮನಗೌಡ ತಂಗಡಗಿ, ಶೇಖರಗೌಡ ಸಾಸನೂರ, ತಿಪ್ಪಣ್ಣ ಪೂಜಾರಿ, ಮುತ್ತು ಧೂಳೇಕರ, ಸುರೇಶ ಕಂಗಳ, ಜಯಪ್ಪ ಹರಿಜನ, ಅನ್ವರ ಅವಟಿ, ಪ್ರಭುಗೌಡ ಬಿರಾದಾರ, ಒಳಗೊಂಡು ನೂರಾರು ಜನರು ಉಪಸ್ಥಿತರಿದ್ದರು.

ಗಡಿಸೋಮನಾಳ ಬಡ ಜನರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಶಾಸಕ ರಾಜುಗೌಡರು ಆಸ್ಪತ್ರೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ ಕೆಲವರು ಅಭಿವೃದ್ದಿ ವಿಷಯದಲ್ಲೂ ಕೂಡಾ ರಾಜಕಾರಣ ಮಾಡಲು ಹೊರಟಿರುವದು ಶೋಭೆ ತರುವಂತಹದಲ್ಲಾ ಶಾಸಕ ರಾಜುಗೌಡರು ವಿರೋಧ ಪಕ್ಷದಲ್ಲಿದ್ದರೂ ಕೂಡಾ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನವನ್ನು ತಂದು ಎಲ್ಲ ಗ್ರಾಮಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಗ್ರಾಮಸ್ಥರ ಅಭಿಪ್ರಾಯದಂತೆ ಅದೇ ನಿಗಧಿತ ಸ್ಥಳದಲ್ಲಿ ಎರಡ್ಮೂರು ದಿನದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಆಗಮಿಸಲಿದ್ದಾರೆ.
                                      ಮಡುಸಾಹುಕಾರ ಬಿರಾದಾರ
                                    ಜೆಡಿಎಸ್ ಪಕ್ಷದ ತಾಲೂಕಾ ಅಧ್ಯಕ್ಷ