
ಸೇಡಂ,ಫೆ,೨೨: ಕಳೆದ ಮೂರು ನಾಲ್ಕು ತಿಂಗಳುಗಳಿAದೆ, ರಾಜಶ್ರೀ ಸಿಮೆಂಟ್ ಘಟಕಕ್ಕೆ ದಿನನಿತ್ಯ ಲಾರಿಗಳಿಂದ ಬರುತ್ತಿರುವ ಧೂಳಿನಿಂದ ತೊಗರಿ ಹೂ ಕಟ್ಟುವ ಸಂದರ್ಭದಲ್ಲಿ ಅತಿ ಹೆಚ್ಚು ಧೂಳು ಬೀಳುತ್ತಿರುವದರಿಂದ ಹೂವು ಉದುರುತ್ತಿದೆ, ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುವ ಪ್ರಯುಕ್ತ ಕಂಪನಿಗೆ, ಕೃಷಿ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು, ರಾಶಿಯಾಗಿ ಇಳುವರಿ ಕಡಿಮೆ ಆದರೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕರಾದ ಬಸವರಾಜ ಮಾಲಿ ಪಾಟೀಲ್, ಮಳಖೇಡ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಹೂಡ.ಬಿ ಗ್ರಾಮದಲ್ಲಿ ಮಳಖೇಡ ರಾಜಶ್ರೀ ಸಿಮೆಂಟ್ ಕಂಪನಿಗೆ ತೆರಳುವ ಮುಖ್ಯ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿ ವರದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಾ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಧರಣಿ ಸತ್ಯಾಗ್ರಹ ಕೈಬಿಡುವಂತೆ ತಾಲೂಕ ಅಧಿಕಾರಿಗಳು ಪ್ರತಿಭಟನಾ ರೈತರನ್ನು ಮನವೊಲಿಸಿ ಪರಿಹಾರ ಹಾಗೂ ರಸ್ತೆ ಸುಧಾರಣೆಗೆ ಸಭೆ ಕರೆಯಲಾಗುತ್ತದೆ ಅಲ್ಲಿ ನಿಮ್ಮ ಬೇಡಿಕೆಯಂತೆ ಪೂರೈಸುವ ವ್ಯವಸ್ಥೆ ತಾಲೂಕ ಆಡಳಿತದ ವತಿಯಿಂದ ಮಾಡಲಾಗುತ್ತದೆ ಎಂಬ ಮಾತಿನಿಂದ ರೈತರು ಧರಣಿ ಸತ್ಯಾಗ್ರಹ ಹಿಂದೆ ಸರಿದು ಮನವಿ ಪತ್ರ ಸಲ್ಲಿಸಿದರು.ಗ್ರೇಡ್ ೨ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಅಶೋಕುಮಾರ ಶೀಲವಂತ,ಶಿವಶರಣಪ್ಪ ಪೂಜಾರಿ, ಭೀಮರಾವ್ ಪಾಟೀಲ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ವಾಲಿಕರ್, ಶಾಂತಪ್ಪ ಮುಕರಂಬಿ, ಬಸವರಾಜ ಹಳಿಜೋಳ, ಸುಬ್ಬಣ್ಣ ಜಮಾದರ,ಹಸನಖಾನ ಮಳಖೇಡ,ಮುದ್ದಣ್ಣ ಜಮಾದ,ಶರಣಪ್ಪ ಪತ್ತಾರ,ಚಂದ್ರಶೇಖರ, ನಾಗಪ್ಪ ಜಮಾದ,ಭೀಮಾಶಂಕರ, ರಾಮಯ್ಯ, ಗಪೂರ ಪಟೇಲ್ ಸೇರಿದಂತೆ ಎರಡು ಗ್ರಾಮಗಳ ರೈತರು ಉಪಸ್ಥಿತರಿದ್ದರು.
ಧೂಳಿನಿಂದ ಬೆಳೆ ಹಾನಿಯಾಗಿ ರಸ್ತೆಯಲ್ಲಿ ನೊಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಕೃಷಿ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಎಸಿ ರೂಮು ಬಿಟ್ಟು ಹೊರಬರುತ್ತಿಲ್ಲ ಹಾನಿಯಾದ ಜಮೀನುಗಳಿಗೆ ಅಧಿಕಾರಿಗಳು ವೈಜ್ಞಾನಿಕ ಸಮೀಕ್ಷೆ ನಡೆಸಿ, ಕಂಪನಿಗಳಿAದ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡಿಸಬೇಕಾದ ಅಧಿಕಾರಿಗಳು ಕಂಪನಿಗಳ ಪರವಾಗಿ ನಿಂತಿರುವುದು ದುರದೃಷ್ಟಕರ.ರಸ್ತೆಗಳಿಗೆ ನೀರು ಸಿಂಪಡಿಸುವುದು ಹಾಗೂ ಧೂಳು ನಿಯಂತ್ರಣಕ್ಕೆ ಕಂಪನಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಬೇಕು.
ಅಶೋಕಕುಮಾರ್ ಶೀಲವಂತ
ಮಾಹಿತಿ ಹಕ್ಕು ಹೋರಾಟಗಾರರು ಸೇಡಂ



























