Home ಜಿಲ್ಲೆ ಅಧಿಕಮಾಸದಲ್ಲಿ ಶುಭಕಾರ್ಯಗಳು ಮಾಡುವಂತಿಲ್ಲ:ವೇ: ಜೋಷಿ

ಅಧಿಕಮಾಸದಲ್ಲಿ ಶುಭಕಾರ್ಯಗಳು ಮಾಡುವಂತಿಲ್ಲ:ವೇ: ಜೋಷಿ

ತಾಳಿಕೋಟೆ:ಮೇ.೨೩: ಮೂರು ವರ್ಷಗಳಿಗೊಮ್ಮೆ ಬರುವಂತಹ ಅಧಿಕಮಾಸ ಹಿಂದೂ ಧರ್ಮದಲ್ಲಿ ಬಹಳೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಒಂದೊAದು ಮಾಸಕ್ಕೆ ಒಂದೊAದು ದೇವರು ಅಧಿಪತಿಯಾಗಿದ್ದಾರೆ ಆದರೆ ಅಧಿಕಮಾಸದ ಹೊರೆಯನ್ನು ಮಹಾವಿಷ್ಣು ದೇವರು ಹೊತ್ತಿದ್ದಾನೆಂದು ಸ್ಥಳೀಯ ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ|| ಸಂತೋಷ ಜೋಷಿ ಅವರು ನುಡಿದರು.
ಶುಕ್ರವಾರರಂದು ಶ್ರೀ ಶಾರದಾದೇವಿ ಮಹಿಳಾಮಂಡಳದ ವತಿಯಿಂದ ಅಧಿಕಮಾಸದ ನಿಮಿತ್ಯವಾಗಿ ಶ್ರೀ ವಿಠ್ಠಲಮಂದಿರದಲ್ಲಿ ಏರ್ಪಡಿಸಲಾದ ಮಹಾಲಕ್ಷಿö್ಮÃತಾಯಿಯ ಸಾಮೂಹಿಕ ಕುಂಕುಮಾರ್ಚನೆ ಮಹಾಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು ದಾರ್ಮಿಕ ವಿಧಿವಿಧಾನಗಳನ್ನು ಪಾಲಿಸಿ ಮಹಾವಿಷ್ಣಿವಿನ ಕೃಪೆಗೆ ಪಾತ್ರರಾಗಲು ಈ ಮಾಸ ಇದು ಸೂಕ್ತ ಸಮಯವಾಗಿದೆ ಧಾರ್ಮಿಕ ವಿಚಾರಗಳಿಗೆ ತುಂಬಾ ಹತ್ತಿರವಾದಂತಹ ಪುಣ್ಯದ ಕಾರ್ಯಗಳನ್ನು ನೆರವೇರಿಸುತ್ತಾ ಸಾಗಿದರೆ ಅಧೃಷ್ಟವೆಂಬುದು ಒಲಿದೇ ಒಲಿಯುತ್ತದೆ ಎಂದು ಅಧಿಕ ಮಾಸವೆಂಬುದನ್ನು ತಿರಸ್ಕರಿಸಿದಂತಹ ಮಹಾಭಾರತದಲ್ಲಿಯ ನಡೆದಂತಹ ಘಟನೆಗಳ ಕುರಿತು ವಿವರಿಸಿದ ಜೋಷಿ ಅವರು ಅಧಿಕ ಮಾಸವೆಂಬುದಕ್ಕೆ ಅಧಿಪತಿಯಾರು ಎಂಬುದಿಲ್ಲಾ ಆ ಮಾಸಕ್ಕೆ ಬಹು ಜಾಗೃತೆಯಿಂದ ಜಪ ತಪ ದಾನ ಧರ್ಮ ಮಾಡಬೇಕು ಅಂದರೆ ದೇವ ಹಾಗೂ ದೇವಿಯ ಒಲುಮೆಯಾಗಲಿದೆ ಎಂದು ಹೇಳಿದ ಜೋಷಿ ಅವರು ಮೇಧಾವಿ ಋಷಿಯ ಹಾಗೂ ದುರ್ವಾಸಮುನಿಗಳ ಇತಿಹಾಸ ಅವರ ವಿಷಯಗಳನ್ನು ವಿವರಿಸಿ ಈ ಮಾಸದಲ್ಲಿ ಯಾವರೀತಿ ನಡೆದರೆ ದೇವನ ಒಲುಮೆಯಾಗುತ್ತದೆ ಎಂಬುದರ ಕುರಿತು ವಿವರಿಸಿ ಶ್ರೀ ಮಹಾಲಕ್ಷಿö್ಮÃ ತಾಯಿಯ ಮಹಾಪೂಜಾ ಕಾರ್ಯಕ್ರಮ ಯಾವ ರೀತಿ ವಿಗ್ರಹ ಫೋಟೋವನ್ನಿಟ್ಟು ಪೂಜೆಗೈಯಬೇಕು ಕುಂಕುಮಾರ್ಚನೆ ಕುರಿತು ಆರತಿ ಕುರಿತು ಪಠಿಸಬೇಕಾದ ಮಂತ್ರಗಳ ಕುರಿತು ಹಾಗೂ ಲಕ್ಷಿö್ಮÃ ಅಷ್ಟೋತ್ತರ ನಾಮಾವಳಿಗಳನ್ನು ಜಪಿಸುವ ಮೂಲಕ ಮಹತ್ವದಾಯಕ ಪೂಜಾ ಕಾರ್ಯಕ್ರಮವನ್ನು ಜೋಷಿ ಅವರು ನೆರವೇರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಮಹಾಲಕ್ಷಿö್ಮÃ ತಾಯಿಯ ಕುಂಕುಮಾರ್ಚನೆ ಕೈಕೊಳ್ಳುವದು ಆ ತಾಯಿಯ ಅನುಗ್ರಹ ಪಡೆದುಕೊಳ್ಳುವದ್ದಾಗಿದೆ ಇದರಿಂದ ಸಂಪತ್ತು ಸೌಭಾಗ್ಯವೆನ್ನುವಂತಹದ್ದು ಲಭ್ಯವಾಗಿ ಸನ್ಮಾರ್ಗದ ದಾರಿ ದೊರೆಯಲಿದೆ ಎಂದ ಅವರು ಮುಖ್ಯವಾಗಿ ದೇವಿಯ ೧೦೮ ನಾಮಾವಳಿಗಳನ್ನು ಹೇಳುತ್ತಾ ಕುಂಕುಮಾರ್ಚನೆ ಅರ್ಪಿಸುವದು ಶ್ರೇಷ್ಠವೆಂದು ಹೇಳಲಾಗುತ್ತದೆ ಶ್ರೀ ದೇವಿಯ ಶಕ್ತಿ ತತ್ವವನ್ನು ಇದು ಆಕರ್ಷಿಸುತ್ತದೆ ಅರ್ಚನೆಯ ನಂತರ ದೇವಿಗೆ ಅರ್ಪಿಸಿದ ಕುಂಕುಮ ಮಹಾಪ್ರಸಾದವಾಗಿ ಹಣೆಗೆ ಹಚ್ಚಿಕೊಳ್ಳುವದರಿಂದ ಅಪೇಕ್ಷಿತ ಸಕಲ ಸೌಭಾಗ್ಯ ದೊರೆಯಲಿದೆ ಎಂದು ಈ ಹಿಂದೆ ಇದೇ ಶಾರದಾದೇವಿ ಮಹಿಳಾ ಮಂಡಳವನ್ನು ಹುಟ್ಟುಹಾಕಿದ ದಿ. ಶ್ರೀಮತಿ ಶಾಂತಾಬಾಯಿ ನೂಲಿಕರ ಅವರ ಮಾರ್ಗವನ್ನು ಅನುಸರಿಸುತ್ತಾ ಸಾಗಿದ ಈ ಸಂಸ್ಥೆಯ ಎಲ್ಲ ಪದಾಧಿಕಾರಿಗಳ ಹಾಗೂ ಸದಸ್ಯರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಇದೇ ಸಮಯದಲ್ಲಿ ಶ್ರೀ ಶಾರದಾದೇವಿ ಮಹಿಳಾ ಬ್ಯಾಂಕ್ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಕಾರ್ಜೋಳ, ಶ್ರೀಮತಿ ಸುರೇಖಾ ಬಿಳೇಬಾವಿ, ಹಾಗೂ ಶ್ರೀಮತಿ ಸೀಮಾ ಚವ್ಹಾಣ, ಸುರೇಖಾ ಸಾಲಂಕಿ ಅವರು ದಿ. ಶಾಂತಾಬಾಯಿ ನೂಲಿಕರ ಅವರು ಹುಟ್ಟುಹಾಕಿದಂತ ವಿವಿಧ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವದರೊಂದಿಗೆ ಬಾವಕ್ಯರಾಗಿದ್ದುದು ಕಂಡುಬAದಿತು.
ಇದೇ ಸಮಯದಲ್ಲಿ ಶ್ರೀ ಶಾರದಾದೇವಿ ಮಹಿಳಾ ಮಂಡಳದ ಅಧ್ಯಕ್ಷರು ಹಾಗೂ ಯೋಗಪಟುಗಳಾದ ಶ್ರೀಮತಿ ಸುರೇಖಾ ಸಾಲಂಕಿ ಅವರು ಯೋಗಾಸನ ಕುರಿತು ಯೋಗಗಾಯನದೊಂದಿಗೆ ಯೋಗ ಪ್ರದರ್ಶಿಸಿ ಯೋಗಾಸನದ ಮಹತ್ವ ಕುರಿತು ವಿವರಿಸಿದರು.
ಉಪಾಧ್ಯಕ್ಷರಾದ ಅನುಸೂಬಾಯಿ ದೇಶಪಾಂಡೆ ಹಾಗೂ ಅಥಿತಿಗಳಾದ ವಿಠ್ಠಲಮಂದಿರ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಸಂಬಾಜಿ ವಾಡಕರ ಹಾಗೂ ಶಾರದಾದೇವಿ ಮಹಿಳಾ ಮಂಡಳದ ಸರ್ವ ಪದಾಧಿಕಾರಿಗಳಿಗೆ ಹಾಗೂ ಶಾರದಾದೇವಿ ಬ್ಯಾಂಕ್ ನ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಲತಾ ಪ್ರಥಮಶೆಟ್ಟಿ ಗೀತಾ ಬಳಗಾನೂರ, ಶೋಭಾ ಕಟ್ಟಿಮನಿ, ಸುನಿತಾ ಸೋನಾರ, ಸುವರ್ಣಾ ರಾಯಕರ, ಸೋನುಬಾಯಿ ಶಿಂದೆ, ಮೀನಾಕ್ಷಿ ಪಾಟೀಲ, ಸುಮಂಗಲಾ ಕಲ್ಬುರ್ಗಿ, ಸವಿತಾ ಕಶಟ್ಟಿ ಇದ್ದರು.