Home ಜಿಲ್ಲೆ ಔರಾದ : ಗಮನ ಸೆಳೆದ ಪಶು ಪ್ರದರ್ಶನ

ಔರಾದ : ಗಮನ ಸೆಳೆದ ಪಶು ಪ್ರದರ್ಶನ

ಔರಾದ್ : ಫೆ.24:ಪಟ್ಟಣದ ಸುಪ್ರಸಿದ್ಧ ಉದ್ಭವಲಿಂಗ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆಯುವ ಪಶು ಪ್ರದರ್ಶನ ಈ ವರ್ಷವೂ ಸಹ ಸೋಮವಾರ ವಿವಿಧ ತಳಿಯ ಜಾನುವಾರುಗಳ ಪ್ರದರ್ಶನದ ಮೂಲಕ ಗಮನ ಸೆಳೆಯಿತು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಡೆಯುವ ಪಶು ಪ್ರದರ್ಶನದಲ್ಲಿ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಹತ್ತಾರು ತಳಿಯ ಜಾನುವಾರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ರೈತರು ತಮ್ಮ ರಾಸುಗಳಿಗೆ ಮೈ ತೊಳೆದು ವಿವಿಧ ರೀತಿಯ ಅಲಂಕಾರ ಮಾಡಿ ತಮ್ಮ ಪಶುಗಳ ಜೋತೆ ಭಾಗವಹಿಸಿದರು. ಉತ್ತಮ ರೀತಿಯಲ್ಲಿ ಪೆÇೀಷಣೆ ಮಾಡಿದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ನೆರೆಯ ದೆವರ್ಜನನ ನಾರಾಯಣ ಮಾಧವರಾವ ಅವರ ಹಾಲು ಕುಡಿಯುವ ಹೋರಿ 10 ಸಾವಿರ ರೂಪಾಯಿಯ ಪ್ರಥಮ ಬಹುಮಾನ ಪಡೆಯಿತು. ಜಳಕೋಟ ಕುಣಶಿಯ ತಿರುಪತಿ ದೇವರಾಜ ಅವರ ನಾಲ್ಕು ಹಲ್ಲಿನ ಹೋರಿ 7500 ರೂಪಾಯಿಯ ದ್ವಿತೀಯ ಬಹುಮಾನ ಪಡೆಯಿತು. ಪಟ್ಟಣದ ಖಂಡು ಕಿಶನ ಮಾನೆ ಅವರ ದೇಶಿ ಆಕಳು 5 ಸಾವಿರ ತೃತೀಯ ಬಹುಮಾನ ಪಡೆಯಿತು. ಸಮಾಧಾನಕರ ಬಹುಮಾನವಾಗಿ ಸಾವಿರ ರೂಪಾಯಿ ನಗದು ಹಾಗೂ ಐದು ನೂರು ರೂಪಾಯಿ ನಗದು ಬಹುಮಾನ ವಿತರಿಸಿದರು.

ಜಾನುವಾರು ಸಾಕಾಣಿಕೆಗೆ ಪೆÇ್ರೀತ್ಸಾಹ ಕೊಡುವ ಹಾಗೂ ರೈತ ಸಮೂಹವನ್ನು ಹೆ?ನುಗಾರಿಕೆಯತ್ತ ಸೆಳೆಯುವ ಉದ್ದೆ?ಶದಿಂದ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ ಹತ್ತಾರು ಬಗೆಯ ತಳಿಗಳ ಪ್ರದರ್ಶನ ಇಲ್ಲಿ ಮಾಡಲಾಗುತ್ತದೆ. ಇಲ್ಲಿ ಭಾಗವಹಿಸಿದ ರೈತರಿಗೆ ಸೂಕ್ತ ಸಹಾಯವನ್ನು ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷ ಆನಂದ ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಹಸೀಲ್ದಾರ ಮಹೇಶ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ರಾಜು ಕೌಠಾಳೆ, ಧೊಂಡಿಬಾ ನರೋಟೆ, ರವೀಂದ್ರ ಮೀಸೆ, ಶಿವರಾಜ ಅಲ್ಮಾಜೆ, ರಘುನಾಥ ಬಿರಾದಾರ, ಪ್ರಕಾಶ ಘೂಳೆ, ಪ್ರಕಾಶ ಉಚ್ಚೆ, ನಿಖಿಲ ಡೊಂಬಾಳೆ, ದೇವಿದಾಸ, ಚವ್ಹಾಣ ಆನಂದ ಕಾರಜೋಳಗೆ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.