ಗುಮ್ಮಾ ಗ್ರಾಮದಲ್ಲಿ ಶೀಲುಬೆ ಕಿತ್ತುಹಾಕಲು ಯತ್ನ – ಗ್ರಾಮಸ್ಥರಿಂದ ದೂರು

ಬೀದರ್: ಡಿ.3:ಜಿಲ್ಲೆಯ ಗುಮ್ಮಾ ಗ್ರಾಮದಲ್ಲಿ ಶೀಲುಬೆ (ಕ್ರಾಸ್) ಕಿತ್ತುಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪದ ಮೇಲೆ ಗ್ರಾಮಸ್ಥರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗುಮ್ಮಾ ಗ್ರಾಮದ ನಿವಾಸಿಗಳಾದ ದಿಲೀಪ ಬಾಬಶೆಟ್ಟಿ, ಬಕ್ಕಪ್ಪಾ ಕೊಂಡಾ ಹಾಗೂ ನಾಗೇಶ್ ಪಾಟೀಲ್ ಎಂಬವರು ಒಟ್ಟುಗೂಡಿ ಗ್ರಾಮದ ಶೀಲುಬೆಯನ್ನು ತೆರವುಗೊಳಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಜಾತಿ ಆಧಾರಿತ ಸಹಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಗ್ರಾಮದಲ್ಲಿ 1999ರಲ್ಲಿ ನಿರ್ಮಾಣಗೊಂಡು, ಆಗಿನ ಉಪ ಸಭಾಪತಿ ಡೇವಿಡ್ ಸಿಮಾನ್ ಅವರಿಂದ ಉದ್ಘಾಟನೆಗೊಂಡ ಈ ಶೀಲುಬೆ ಇಂದಿಗೂ ಅಸ್ಥಿತ್ವದಲ್ಲಿದೆ. ಇತ್ತೀಚೆಗೆ ಶೀಲುಬೆಗೆ ಸ್ವಲ್ಪ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇದೀಗ ಕೆಲವರು ಇದನ್ನು ಕಿತ್ತುಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಗ್ರಾಮ ಪಂಚಾಯಿತಿಯವರು ಹಲವು ಬಾರಿ ಸಂಧಾನ ಸಭೆ ಕರೆದರೂ ಆರೋಪಿಗಳ ಪೈಕಿ ಯಾರೂ ಹಾಜರಾಗಿಲ್ಲ. ಗ್ರಾಮಸ್ಥರ ದೂರು ಪ್ರಕಾರ, ಆರೋಪಿಗಳು ಜಾತಿ ನಿಂದನೆ ನಡೆಸುತ್ತಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಸ್ಥರು ಈ ಮೂವರು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೆÇಲೀಸರಿಗೆ ಆಗ್ರಹಿಸಿದ್ದಾರೆ