
ಚಡಚಣ ಆ.೨೬: ಇತ್ತೀಚಿಗೆ ಬಳ್ಳೊಳ್ಳಿಯ ವೀರಭದ್ರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಇಂಡಿ-ಚಡಚಣ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿದ ಕ್ರೀಡೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹರೀಶ ಆಲಕುಂಟೆ ಹೈ ಜಂಪನಲ್ಲಿ ಪ್ರಥಮ ಮತ್ತು ಶಾಟ್‌ಫೂಟ್‌ನಲ್ಲಿ ದ್ವಿತೀಯ ಸ್ಥಾನ, ಸಾಕ್ಷೀ ತೇಲಿ ಹೈ ಜಂಪನಲ್ಲಿ ಪ್ರಥಮ ಮತ್ತು ಟ್ರಿಪಲ್ ಜಂಪನಲ್ಲಿ ಪ್ರಥಮ ಸ್ಥಾನ, ಸತೀಶ ಚೌದರಿ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ, ಸುಮಿತ್ರಾ ಹತ್ತಿ ಟ್ರೀಪಲ್ ಜಂಪನಲ್ಲಿ ದ್ವಿತೀಯ, ಪಂಕಜ ಕಾಂಬಳೆ ಡಿಸ್ಕ ಥ್ರೋನಲ್ಲಿ ದ್ವಿತೀಯ, ರೇಣುಕಾ ಜತ್ತಿ ಟ್ರಿಪಲ್ ಜಂಪನಲ್ಲಿ ತೃತಿಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಮನೋಜ ಕಟಗೇರಿ, ದೈಹಿಕ ಉಪನ್ಯಾಸಕರು, ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ































