
ಕೋಲಾರ,ಮೇ.೨೪- ಪಿ. ಗೋಪಾಲನ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ತಾಲೂಕಿನ ಹೊನ್ನೇನಹಳ್ಳಿಯ ಜಿ. ದೊರೆಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಮತ್ತು ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಅಂಡರ್-೧೯ ವಿಭಾಗದಲ್ಲಿ ಟೇಬಲ್ ಟೆನ್ನೀಸ್‌ನಲ್ಲಿ ಕೋಲಾರ ಜಿಲ್ಲೆಯವರೇ ಅಧ ಚಂದನ್ ಎಸ್ ಪ್ರಥಮ, ಸಾಯಿ ಚಿನ್ಮಯ್ ಪಿ ದ್ವಿತೀಯಾ, ಅಂಡರ್ -೧೩ ವಿಭಾಗದಲ್ಲಿ ತನಿಶ್ ಪ್ರಥಮ, ಸುದೀಕ್ಷಾ ದ್ವಿತೀಯ, ಅಂಡರ್-೧೦ ವಿಭಾಗದಲ್ಲಿ ಇಂದ್ರನ್ ಎಸ್ ಕುಮಾರ್ ಪ್ರಥಮ, ಹೃತ್ವಿಕ್ ದ್ವಿತೀಯ ಸ್ಥಾನದೊಂದಿಗೆ ಭುವನ್, ಭನ್ವಿತಾ, ನಿಹಾಲ್, ಹೇಮಂತ್, ದನುಷ್, ಮನೋಮಯಿ, ಲಕ್ಷ್ಮಿ, ಯೋಗನಾ ಸೇರಿದಂತೆ ಸುಮಾರು ೧೫೦ ಕ್ರೀಡಪಟುಗಳು ಭಾಗವಹಿಸಿದ್ದರು.
ಇವರನ್ನು ಅಂತರಾಷ್ಟ್ರೀಯ ಅಥ್ಲೀಟ್ ಜಿ ದೊರೆಸ್ವಾಮಿ ಆಚಾರಿ, ಚೆಸ್ ಕೋಚ್ ಧನಲಕ್ಷ್ಮಿ, ಟೇಬಲ್ ಟೆನ್ನಿಸ್ ಕೋಚ್ ಪ್ರಸನ್ನ, ಡಾ.ಮನೋಹರ್ ಗೌಡ ಬಿ.ಜಿ ಮತ್ತು ಡಾ ಮಂಜುನಾಥ್, ಚೆಸ್ ಆರ್ಬಿಟಾರ್ ಜಯಂತೀರ ಕುಮಾರ್ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.
ಆಯೋಜಕರಾದ ಶಿವ ಕುಮಾರ್ ಡಿ, ಪ್ರಕಾಶ್ ವಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಿದರು.