
ವಿಜಯಪುರ,ಜು.4:ನಗರದ ಬಿಎಲ್‍ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನವು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೀಣಾ ಎ. ಪಾಟೀಲ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.
” ಆಟೋಮ್ಯಾಟಿಕ್ ದೆತೆಕ್ಟಿಒನ್ ಆಫ್ ಕ್ಯಾಂಸೆರೌಸ್ ಸೆಲ್ಲ್ಸ್ ಇನ್ ಹಿಸ್ತೋಪತೋಲೋಗಿಕಾಲ್ ಇಮಜಸ್ ಆಫ್ ಉತೆರಿನೆ ಟಿಶ್ಯೂ.” ಎಂಬ ಶೀರ್ಷಿಕೆಯ ಪ್ರಬಂಧಕ್ಕೆ ಪಿಎಚ್‍ಡಿ ದೊರೆತಿದೆ.
ವೀಣಾ ಪಾಟೀಲ್ ಅವರು ಬಾಗಲಕೋಟೆಯ ಬಸವೇಶ್ವರ ಕಾಲೇಜ್ ಆಫ್ ಎಂಜಿನಿಯರಿಂಗ್‍ನಲ್ಲಿ ಇನ್ಫಾರ್ಮಶನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಶೋಭಾ ಆರ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ನಡೆಸಿದರು.
ಬಿಎಲ್‍ಡಿಇ ಅಸೋಸಿಯೇಷನ್‍ನ ಆಡಳಿತ ಮಂಡಳಿ, ನಿರ್ದೇಶಕ ಡಾ. ವಿ.ಜಿ. ಸಂಗಮ, ಪ್ರಾಂಶುಪಾಲ ಡಾ. ಮಂಜುನಾಥ ಪಿ, ಉಪ ಪ್ರಾಂಶುಪಾಲರು ಡಾ. ಲೀನಾ ರಾಘಾ ಮತ್ತು ಡಾ. ಪಿ.ವಿ. ಮಾಳಜಿ ಹಾಗೂ ವಿಭಾಗಗಳ ಮುಖ್ಯಸ್ಥರು ಅವರ ಈ ಗಮನಾರ್ಹ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.