ಬೀದರ್:ಸೆ.೨: ನಗರದ ಚಿದ್ರಿ ರಸ್ತೆಯಲ್ಲಿರುವ ಹನುಮಾನ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೃಷಿ ಸಮಾಜದ ಮುಖಂಡರಾದ ದಯಾನಂದ ಸ್ವಾಮಿ ಸಿರ್ಸಿ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸೋಮವಾರ ಸಂಜೆ ಅಷ್ಟಲಕ್ಷ್ಮಿ ಪೂಜೆ ನೆರವೇರಿತು
ಕುಟುಂಬಸ್ಥರು ಸೇರಿ ಸೋಮವಾರ ಸಂಜೆ ೭:೦೦ ಗಂಟೆಗೆ ಅಷ್ಟಲಕ್ಷ್ಮಿ ಪೂಜೆ ನೆರವೇರಿಸಿದರು. ನಂತರ ತಮ್ಮ ಸಂಬAಧಿಕರು ಮಿತ್ರರು, ನೆಂಟರಿಷ್ಟಾಧಿಯಾಗಿ ಎಲ್ಲರಿಗೆ ಔತಣಕೂಟ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ದಯಾನಂದ ಸ್ವಾಮಿ ಸಿರ್ಸಿ ಅವರ ಧರ್ಮ ಪತ್ನಿ ಜೈಶ್ರೀ, ದಯಾನಂದ ಸ್ವಾಮಿ, ಪುತ್ರರಾದ ಆಕಾಶ, ಆದರ್ಶ್,ಸಾಯಿ ಶಂಕರ, ಶ್ರೇಷ್ಠ,, ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಸೋಲಪುರ, ಇಂಜಿನಿಯರ್ ಬಸವಕುಮಾರ ಸ್ವಾಮಿ ಸೇರಿದಂತೆ ಇತರೆ ಬಂಧು ಮಿತ್ರರು ಹಾಗೂ ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.























