Home ಜಿಲ್ಲೆ ಸಿಎ ಪರೀಕ್ಷೆಯಲ್ಲಿ ಅಥಣಿಯ ಅರುಂದತಿ ಪಾಟೀಲ ಸಾಧನೆ

ಸಿಎ ಪರೀಕ್ಷೆಯಲ್ಲಿ ಅಥಣಿಯ ಅರುಂದತಿ ಪಾಟೀಲ ಸಾಧನೆ

ಅಥಣಿ: ಮಾ.೯: ದೇಶದ ಪ್ರತಿಷ್ಠಿತ ವೃತ್ತಿಪರ ಕೋರ್ಸ್ ಗಳಲ್ಲಿ ಒಂದಾಗಿರುವ ಚಾರ್ಟೆರ್ಡ ಅಕೌಂಟೆAಟ್ (ಸಿಎ) ಪರೀಕ್ಷೆಯಲ್ಲಿ ಪಟ್ಟಣದ ಕು. ಅರುಂದತಿ ಕಲಗೌಡ ಪಾಟೀಲ ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಅರುಂಧತಿ ಪಾಟೀಲ ಸ್ಥಳೀಯ ಜೆ ಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ, ಬೆಳಗಾವಿಯ ವಿ.ಜಿ ಪಾಟೀಲ ಅಸೋಸಿಯೇಟ್ಸ್ ನಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಬೆಳಗಾವಿಯ ಅಪೂರ್ವ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದಾಳೆ. ಕು. ಆರುಂದತಿ ಸಾಧನೆಗೆ ತಂದೆ ಕಲಗೌಡ, ತಾಯಿ ಸರಿತಾ ಪಾಟೀಲ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.