ಕರಜಗಿ:ಅ.8:ನವರಾತ್ರಿ ಸಂದರ್ಭದಲ್ಲಿ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಗ್ರಾಮದ ಭಾಗೇಶ ರೇವಣಸಿದ್ದಪ್ಪ ಬುರುಡ ಮನೆಗೆ ಕೆ ಕೆ ಆರ್ ಟಿ ಸಿ ಅಧ್ಯಕ್ಷ ಅರುಣಕುಮಾರ ಎಂ ವೈ ಪಾಟೀಲ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಸಹಾಯ ಮಾಡಿದರು ನಂತರ ಅವರು ಮಾತನಾಡಿ ದುಃಖದಲ್ಲಿರುವ ಭಾಗೇಶನ ಪರಿವಾರದ ಜೊತೆ ನಾವು ಇದ್ದೇವೆ ಎಂದು ತಾಯಿಯನ್ನು ಸಂತೈಸಿ,ಧೈರ್ಯ ತುಂಬಿದರು.ಇಂಥ ಘಟನೆ ನಡೆದಿರುವುದು ದುರದೃಷ್ಟಕರ,ಈ ಘಟನೆ ನಡೆಯಬಾರದಿತ್ತು.ಮೃತ ಭಾಗೇಶ ಕ್ರಿಯಾಶೀಲ ವ್ಯಕ್ತಿಯಾಗಿದ್ದ,ಯುವಕನ ಕುಟುಂಬದೊಂದಿಗೆ ನಮ್ಮ ಕುಟುಂಬ ಸದಾ ಜೊತೆಗಿರುತ್ತದೆ.ಮೃತ ಯುವಕ ಬಾಗೇಶನ ಕುಟುಂಬಕ್ಕೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವಪ್ಪ ಕರೂಟಿ ಸಿದ್ದಪ್ಪ ಹತ್ತರಕಿ ಇರ್ಫಾನ್ ಜಮಾದಾರ ಚನ್ನುಗೌಡ ಕರೂಟಿ ಬಸವರಾಜ ವಾಯಿ ವಿವೇಕಾನಂದ ಕೋಗಟನೂರ ಯಶ್ವಂತ ಕರೂಟಿ ಮಾಳಪ್ಪ ಪೂಜಾರಿ ಗುಳುರಾಯ ಬುರುಡ ಜಗದೀಶ ದೇಶಟ್ಟಿ ಭೀಮಾಶಂಕರ ಪೂಜಾರಿ ಸಂತೋಷ ಅಲ್ಲಾಪೂರ ಮಹಾಂತೇಶ ಜಕಾಪೂರ ನಿಖಿಲ ಚಣೇಗಾಂವ ರಾಜಶೇಖರ ಪ್ಯಾಟಿ ವೇಣುಮಾಧವ ಅವಧಾನಿ ಕನ್ನಪ್ಪ ಪೂಜಾರಿ ಶ್ರೀಕಾಂತ ನಿವರಗಿ ಇತರರಿದ್ದರು

























