ಕಲಾವಿದರಿಗೆ ಪ್ರೋತ್ಸಾಹ ಅಗತ್ಯ :ಮೇಲಿನಮನಿ

ಕಲಬುರಗಿ:ಜೂ.೩೦:ಕಲಾವಿದರಿಗೆ ಪ್ರೋತ್ಸಾಹ ಅಗತ್ಯ, ಏಕೆಂದರೆ ಎಲೆ ಮರೆ ಕಾಯಿಯಂತಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಾಗ ಅವರು ಮುಂದೆ ಬರಲು ಸಾಧ್ಯ ಎಂದು ಮಹಾನಗರ ಪಾಲಿಕೆ ಮಾಜಿ ಮಹಾ ಪೌರರಾದ ಸೋಮಶೇಖರ್ ಮೇಲಿನಮನಿ ಅಭಿಪ್ರಾಯಪಟ್ಟರು.
ಅವರು ನಗರದ ಕಲಾ ಮಂಡಳದಲ್ಲಿ ಜರುಗಿದ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಕಲಬುರಗಿ ವತಿಯಿಂದ ಹಮ್ಮಿಕೊಂಡ ವಚನ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಪೀಳಿಗೆ ಮೊಬೈಲ್ ಗೆ ಮಾರು ಹೋಗಿದ್ದು ಅವರನ್ನು ಸಂಗೀತದ ಕಡೆಗೆ ನಾವು ನೀವೆಲ್ಲರೂ ಆಸಕ್ತಿ ಬರುವ ಹಾಗೆ ಅವರನ್ನು ಇಂತಹ ವೇದಿಕೆ ಮುಖಾಂತರ ಅವರನ್ನು ಸಂಗೀತದ ಕಡೆಗೆ ಒಲವು ಮೂಡಿಸುವದು ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶರಣಮ್ಮ ಆರ್. ಭಂಡಾರಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗುತ್ತೇದಾರರಾದ ಶರಣಬಸವ ಹೆಗಡೆ, ಸಂಜೀವಕುಮಾರ್ ಮೇಲಿನಮನಿ, ಸಂದೀಪಕುಮಾರ್ ಸಂಗಾವಿ ಭಾಗವಹಿಸಿದ್ದರು, ಸಂಸ್ಥೆಯ ಅಧ್ಯಕ್ಷರಾದ ಬಾಬುರಾವ ಕೋಬಾಳ್ ಸ್ವಾಗತಿಸಿದರು, ರುಕ್ಮೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ನಂತರ ನಡೆದ ವಚನ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಆಕಾಶವಾಣಿ ಹಿರಿಯ ಕಲಾವಿದರಾದ ಗುರುಶಾಂತಯ್ಯ ಸ್ಥಾವರ ಮಠ್, ಬಲಭೀಮ ನೆಲೋಗಿ, ಪವಿತ್ರಾ ರಾಜನಾಳ್, ನಾಗಲಿಂಗಯ್ಯ ಸ್ಥಾವರ ಮಠ್, ಜಗದೀಶ್ ಮಾನು, ಅನಿಲಕುಮಾರ್ ಭೀಮಳ್ಳಿ, ಸ್ವಾತಿ ಬಿ. ಕಲಬುರಗಿ, ಸಾಗರ್ ಭೀಮಳ್ಳಿ, ವೀರಬದ್ರಯ್ಯ ಭೂಸನೂರ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.