Home ಜಿಲ್ಲೆ ಕಲಬುರಗಿ ಡಿಸೆಂಬರನಲ್ಲಿ ಕಲಬುರ್ಗಿಯಲ್ಲಿ ಕಲಾವಿದರ ಸಮ್ಮೇಳನ

ಡಿಸೆಂಬರನಲ್ಲಿ ಕಲಬುರ್ಗಿಯಲ್ಲಿ ಕಲಾವಿದರ ಸಮ್ಮೇಳನ

ಕಲಬುರಗಿ,ಅ.22: ಕಲೆ, ಸಾಹಿತ್ಯ, ಸಂಸ್ಕøತಿ, ಕಲಾವಿದರ ಉಳಿವು ಬೆಳವಿಗಾಗಿ, ಮುಂಬರುವ ಡಿಸೆಂಬರ ಕೊನೆಯಲ್ಲಿ ಕಲ್ಯಾಣ ಕರ್ನಾಟಕ ಕೇಂದ್ರ ಸ್ಥಾನವಾದ ಕಲ್ಬುರ್ಗಿಯಲ್ಲಿ, ರಾಜ್ಯಾಧ್ಯಕ್ಷ ಎಂ.ಎಸ್ ರವೀಂದ್ರ ಅವರ ನೇತೃತ್ವದಲ್ಲಿ ಕನ್ನಡ ಫಿಲಂ ಚೇಂಬರ್ ಜಿಲ್ಲಾ ಘಟಕದ ವತಿಯಿಂದ ರಂಗಭೂಮಿ, ಮತ್ತು ಚಲನಚಿತ್ರ ಜೊತೆಗೆ ಸಮಸ್ತ ಕಲಾವಿದರ ಸಮ್ಮೇಳನವನ್ನು ಆಯೋಜಿಸಲಾಗುವದೆಂದು, ಕನ್ನಡ ಫಿಲಂ ಚೇಂಬರ್ ಕಲಬುರ್ಗಿ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ತಿಳಿಸಿದರು.
ತಾಲೂಕು ಕೇಂದ್ರ ಯಡ್ರಾಮಿ ಪಟ್ಟಣದ ವಿರಕ್ತ ಮಠದಲ್ಲಿ ಸರಳವಾಗಿ ಜರುಗಿದ ಕನ್ನಡ ಫಿಲಂ ಚೇಂಬರ್ ಪದಾಧಿಕಾರಿಗಳ ನೇಮಕಾತಿ ಪ್ರಮಾಣಪತ್ರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಫಿಲಂ ಚೇಂಬರ್ ಸದಸ್ಯತ್ವವೆನ್ನುವದು ದುಬಾರಿ ಶುಲ್ಕದ ಪರಿಣಾಮವಾಗಿ ಗಗನ ಕುಸುಮವಾಗಿತ್ತು ಆದರೆ ಈಗ ಮೂಲ ಚೇಂಬರ್ ಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ಗಳು ಸೃಷ್ಟಿಯಾಗಿರುವದರಿಂದ ಸಣ್ಣ ಕಲಾವಿದರಿಗೆ, ನಿರ್ಮಾಪಕ ರಿಗೆ, ತಂತ್ರಜ್ಞರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು. ಕಾರ್ಯಕ್ರಮದ ಸಾನಿಧ್ಯವಹಿಸಿದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ಪದಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ (ಜಿಲ್ಲಾಧ್ಯಕ್ಷ ),ರಾಜಶೇಖರ ಆರ್ ಡಗ್ಗಾ,( ಉಪಾಧ್ಯಕ್ಷ ),ಅಮೃತ ದೊಡಮನಿ ( ಉಪಾಧ್ಯಕ್ಷ ),ಕೆ.ಕೆ ದೇಸಾಯಿ .( ಪ್ರಧಾನ ಕಾರ್ಯದರ್ಶಿ )
ರೇವಣಸಿದ್ದಪ್ಪ ಬಿ ಬೆಲ್ಲದ್ (ಪ್ರಧಾನ ಕಾರ್ಯದರ್ಶಿ),ಚಿಂತನಗೌಡ ಪಾಟೀಲ್ ( ಖಜಾಂಚಿ ),ವೀರೇಶ ಕುಂಬಾರ್, ರಮೇಶ ತುಪ್ಪದ್, ಕರೆಪ್ಪ ಹೊಸಮನಿ (ನಿರ್ದೇಶಕರು )ಅವರುಗಳಿಗೆ ನೇಮಕಾತಿ ಪತ್ರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ದೇವಿಂದ್ರಪ್ಪಗೌಡ ಸರಕಾರ, ಮಲ್ಹಾರರಾವ್ ಕುಲಕರ್ಣಿ, ಬಸ್ಸೇಟೆಪ್ಪ ವಾರದ್, ಅಪ್ಪು ಪುರಾಣಿಕ್, ಲಕ್ಷ್ಮೀಕಾಂತ ಸೋನಾರ್ ಮತ್ತಿತರರು ಇದ್ದರು.