
ಬೀದರ್: ಜ.೬:ನಮ್ಮ ಕರ್ನಾಟಕ ಸೇನೆಯ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ಇಲ್ಲಿಯ ಸಂಘಟನೆಯ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ನಡೆಯಿತು.
ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕವಿತಾ ಶಿವದಾಸ ಬಂಪಳ್ಳಿ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಭಿಷೇಕ ರೆಡ್ಡಿ, ಬೀದರ್ ದಕ್ಷಿಣ ಘಟಕದ ಉಪಾಧ್ಯಕ್ಷರಾಗಿ ಮಹಾಂತೇಶ ಕೋಟಿ ಹಾಗೂ ಜನವಾಡ ವಲಯ ಘಟಕದ ಅಧ್ಯಕ್ಷರಾಗಿ ಸಂಗಮೇಶ ಬಿರಾದಾರ ಬಂಪಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.
:ಇದೇ ವೇಳೆ ಝೀ ಕನ್ನಡದ ಸರಿಗಮಪ ಸೀಸನ್ ೨೧ ರ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ಹಾಗೂ ನಮ್ಮ ಕರ್ನಾಟಕ ಸೇನೆಯ ಕಲಬುರಗಿ ಜಿಲ್ಲಾ ಮಹಿಳಾ ಯುವ ಘಟಕದ ಅಧ್ಯಕ್ಷೆ ರಕ್ಷಿತಾ ದಾಮಾ ಅವರನ್ನು ಸನ್ಮಾನಿಸಲಾಯಿತು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಪ್ರತಿಭಾವಂತರು ಇದ್ದಾರೆ. ಇದಕ್ಕೆ ಇಂಡಿಯನ್ ಐಡ???ನಲ್ಲಿ ಪ್ರತಿಭೆ ಪ್ರದರ್ಶಿಸಿದ, ಝೀ ಕನ್ನಡದ ಸರಿಗಮಪ ಸೀಸನ್ ೨೧ ರ ವಿಜೇತೆ ಶಿವಾನಿ ಸ್ವಾಮಿ ಅವರೇ ನಿದರ್ಶನವಾಗಿದ್ದಾರೆ ಎಂದು ಹೇಳಿದರು.
ಸೇನೆ ಸದಾ ಪ್ರತಿಭಾವಂತರ ಬೆಂಬಲಕ್ಕೆ ಇದೆ. ಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ತಿಳಿಸಿದರು.
ಶಿವದಾಸ ಸ್ವಾಮಿ, ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಉದಯಕುಮಾರ ಅಷ್ಟೂರೆ, ಸುಧಾಕರ ರಾಠೋಡ್, ಅನಿಲ್ ರಾಜಗೀರಾ, ಸಂತೋಷ್ ಪಾಟೀಲ, ರವಿ ಪಾಟೀಲ, ರಾಜಕುಮಾರ ಸ್ವಾಮಿ, ಸಾಯಿಕಿರಣ ಮತ್ತಿತರರು ಇದ್ದರು.

























